Sunday, June 14, 2026
spot_imgspot_img
spot_imgspot_img

ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದವರ ಮೇಲೆ ಉರುಳಿ ಬಿದ್ದ ಮರ; ಮೂವರು ಗಂಭೀರ..!

- Advertisement -
- Advertisement -

ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದವರ ಮೇಲೆ ಹಠಾತ್ತಾಗಿ ಮರವೊಂದು ಉರುಳಿ ಬಿದ್ದ ಘಟನೆ ಶಿವಮೊಗ್ಗ ತಾಲೂಕಿನ ಗೊಂದಿ ಚಟ್ನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಶಿಮರ ಬಿದ್ದು ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಂಡ ಮತ್ತು ಹೆಂಡತಿ ತಮ್ಮ ಪುಟ್ಟ ಮಗುವಿನೊಂದಿಗೆ ಹೊಳೆ ಹೊನ್ನೂರಿನಿಂದ ಪ್ರಯಾಣ ಆರಂಭಿಸಿದ್ದರು. ಈ ವೇಳೆ ಚಲಿಸುತ್ತಿದ್ದ ಬೈಕ್‌ ಮೇಲೆ ಮರ ಉರುಳಿ ಬಿದ್ದಿದ್ದು, ಮೂವರೂ ರಸ್ತೆಗೆ ಎಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡಿದ್ದಾರೆ. ಸಿಸಿಟಿವಿಯಲ್ಲಿ ದಾಖಲಾಗಿರುವ ಈ ವಿಡಿಯೋ ಮೈ ಜುಮ್ಮೆನಿಸಿದ್ದು, ಮರ ನೇರವಾಗಿ ಹಿಂಬದಿ ಕುಳಿತಿದ್ದ ತಾಯಿ ಹಾಗು ಮಗುವಿನ ತಲೆಗೆ ನೇರವಾಗಿ ತಾಗಿದೆ.

ದೃಶ್ಯದಲ್ಲಿ ಉರುಳಿ ಬಿದ್ದ ಮರದ ಪಕ್ಕದಲ್ಲೇ ಕೆಲವರು ನಿಂತಿರುವುದು ಕಾಣಿಸುತ್ತಿದ್ದು, ಎದುರಗಡೆಯಿಂದ ಇನ್ನೊಂದು ಬೈಕ್‌ ಬರುವುದೂ ಕಂಡು ಬಂದಿದೆ. ಅಷ್ಟೇ ಅಲ್ಲದೆ ಬೈಕ್ ಹಿಂಬದಿಯಿಂದ ಬರುತ್ತಿದ್ದ ಲಾರಿಯೊಂದು ಸ್ವಲ್ಪದರಲ್ಲೇ ರಸ್ತೆ ಮೇಲೆ ಬಿದ್ದವರ ಮೇಲೆ ಹಾಯುವುದು ತಪ್ಪಿದೆ. ಗಾಯಗೊಂಡ ಮೂವರನ್ನೂ ಶಿವಮೊಗ್ಗದ ಬೇರೆ ಬೇರೆ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೂವರ ಸ್ಥಿತಿಯೂ ಗಂಭೀರವಾಗಿದ್ದು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.

- Advertisement -

Related news

error: Content is protected !!