Monday, August 3, 2026
spot_imgspot_img
spot_imgspot_img

ಕಾಲೇಜು ವಿದ್ಯಾರ್ಥಿಗಳಿಗೆ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಓರ್ವ ಆರೋಪಿಯ ಬಂಧನ

- Advertisement -
- Advertisement -

ಮಣಿಪಾಲ : ಎಂಡ್‌ಪಾಯಿಂಟ್ ಬಳಿ ಮಣಿಪಾಲದ ಕಾಲೇಜು ವಿದ್ಯಾರ್ಥಿಗಳಿಗೆ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಓರ್ವ ಆರೋಪಿಯನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿ ಬ್ರಹ್ಮಾವರದ ಫಜಲ್ ಎಂದು ತಿಳಿದು ಬಂದಿದೆ. ಆರೋಪಿಯ ಬಳಿ 30 ಗ್ರಾಂ ಬ್ರೌನ್ ಶುಗರ್, 54 MDMA ಮಾತ್ರೆಗಳು ಅಂದಾಜು 4,63,600 ಮೌಲ್ಯದ ಡ್ರಗ್ಸ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಡಾರ್ಕ್ ವೆಬ್ ಆನ್ಲೈನ್ ಮೂಲಕ ಬರುವ ಡ್ರಗ್ಸ್ ಗಳನ್ನು ಪೊಲೀಸರು ಪ್ರಕರಣವನ್ನು ಭೇದಿಸಿದ್ದಾರೆ. ಕುಂದಾಪುರ ಎ.ಎಸ್.ಪಿ ಹರಿರಾಮ್ ಶಂಕರ್ ಅವರ ಮಾರ್ಗದರ್ಶನ ದಂತೆ ಮಣಿಪಾಲದ ಇನ್ಸ್ಪೆಕ್ಟರ್ ಮಂಜುನಾಥ್ ಹಾಗೂ ಪಿ.ಎಸ್.ಐ ರಾಜಶೇಖರ್ ಮತ್ತು ಅವರ ತಂಡದ ಕಾರ್ಯಾಚರಣೆಯಿಂದ ಆರೋಪಿಯನ್ನು ಬಂಧಿಸಿದ್ದಾರೆ.

- Advertisement -

Related news

error: Content is protected !!