Monday, July 7, 2025
spot_imgspot_img
spot_imgspot_img

ಆಡು ಕಳ್ಳರ ಬಂಧನ

- Advertisement -
- Advertisement -

ಉಪ್ಪಿನಂಗಡಿ: ಆಡುಗಳನ್ನು ಕದಿಯುವ ತಂಡವನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದು, ಅವರಿಂದ ಕಳ್ಳತನ ಮಾಡಿದ ಆಡುಗಳನ್ನು ವಶಕ್ಕೆ ಪಡೆದಿದ್ದಾರೆ.


34 ನೆಕ್ಕಿಲಾಡಿಯ ಆದರ್ಶನಗರದ ಅಬ್ದುಲ್ ಖಾದರ್ ಎಂಬವರ ಪುತ್ರ ಮಹಮ್ಮದ್ ಸಿನಾನ್ (19), ಇಳಂತಿಲ ಗ್ರಾಮದ ಅಂಬೊಟ್ಟುವಿನ ಇಸಾಕ್ ಎಂಬವರ ಪುತ್ರ ರಿಯಾಝ್ (21), 34 ನೆಕ್ಕಿಲಾಡಿಯ ನೆಕ್ಕಳದ ನಜೀರ್ ಖಾನ್ ಎಂಬವರ ಪುತ್ರ ನಿಝಾಮುದ್ದೀನ್ (18) ಬಂಧಿತ ಆರೋಪಿಗಳು.


ತಾರೀಕು 13 ರಂದು ಸಂಜೆ 4 ರಿಂದ 6 ಗಂಟೆಯ ಒಳಗೆ ಇಳಂತಿಲ ಗ್ರಾಮದ ಕಡವಿನ ಗುಡ್ಡೆ ಎಂಬಲ್ಲಿ ಮೇಯಲು ಬಿಟ್ಟ ಎರಡು ಆಡುಗಳನ್ನು ಹಾಗೂ ಅವುಗಳ ಮರಿಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದಾರೆ ಎಂದು ಇಳಂತಿಲ ಗ್ರಾಮದ ಮಣ್ಣಮಜಲು ಮಗ್ಗ ಎಂಬಲ್ಲಿನ ಉಮ್ಮರ್ ಫಾರೂಕ್ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದರು. ಈ ಬಗ್ಹೆ ಪ್ರಕರಣ ದಾಖಲಿಸಿಕೊಂಡ ಉಪ್ಪಿನಂಗಡಿ ಪೊಲೀಸರು ಅ.15 ರಂದು ಉಪ್ಪಿನಂಗಡಿ – ಗುರುವಾಯನಕೆರೆ ರಸ್ತೆಯ ಕುಪ್ಪೆಟ್ಟಿ ಎಂಬಲ್ಲಿ ಕೆಎ 19 ಎಂ ಎಚ್ 9941 ಡಾಸ್ಟನ್ ಕಾರನ್ನು ತಡೆದು ತಪಾಸಣೆ ನಡೆಸಿದಾಗ ಅದರಲ್ಲಿ ಆಡುಗಳನ್ನು ಸಾಗಾಟ ಮಾಡುತ್ತಿರುವುದು ಕಂಡು ಬಂತು. ಈ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸಿದಾಗ ಆರೋಪಿಗಳು ಕಳವು ನಡೆಸಿದ ವಿಚಾರ ಬಾಯ್ಬಿಟ್ಟರು.


ಉಪ್ಪಿನಂಗಡಿ ಭಾಗದಲ್ಲಿ ಮೇಯಲು ಬಿಟ್ಟ ಆಡುಗಳು ಅನೇಕ ಬಾರಿ ಕಳವಾಗಿದ್ದು, ಆರೋಪಿಗಳನ್ನು ಬಂಧಿಸಿ ಈ ಬಗ್ಗೆ ಹೆಚ್ಚಿನ ವಿಚಾರಣೆ ಪೊಲೀಸರು ನಡೆಸುತ್ತಿದ್ದಾರೆ.
ಉಪ್ಪಿನಂಗಡಿ ಠಾಣಾ ಉಪ ನಿರೀಕ್ಷಕ ಈರಯ್ಯ ಡಿ.ಎನ್. ನೇತೃತ್ವದಲ್ಲಿ ನಡೆದ ಈ ಪತ್ತೆ ಕಾರ್ಯದಲ್ಲಿ ಸಿಬ್ಬಂದಿ ಚೋಮ, ಕುಶಾಲಪ್ಪ, ಹಿತೋಶ್ ಕುಮಾರ್, ಇರ್ಷಾದ್ ಪಿ., ರೇವಣ್ಣ, ಯೊಗೀಶ್, ಚಂದ್ರಶೇಖರ ಪಿ. ಭಾಗವಹಿಸಿದ್ದರು.

- Advertisement -

Related news

error: Content is protected !!