- Advertisement -
- Advertisement -




ಮನೆಯೊಂದರಲ್ಲಿ 10 ಅಡಿ ಆಳದ ಸಂಪ್ಗೆ ಬಿದ್ದಿದ್ದ ಮಗುವನ್ನು ಸಂಚಾರ ಠಾಣೆಯ ಪಿಎಸ್ಐ ಒಬ್ಬರು ಮಗುವನ್ನು ರಕ್ಷಿಸಿದ ಘಟನೆ ಬೆಂಗಳೂರು ನಗರದ ಬಿಇಎಲ್ ಬಳಿ ನಡೆದಿದೆ.
ಸಂಪ್ಗೆ ಬಿದ್ದಿದ್ದ ಎರಡು ವರ್ಷದ ಮಗುವನ್ನು ಬ್ಯಾಟರಾಯನಪುರದ ಸಂಚಾರ ಠಾಣೆಯ ಪಿಎಸ್ಐ ನಾಗರಾಜ್ ಅವರು ರಕ್ಷಣೆ ಮಾಡಿದ್ದಾರೆ.
ಬಿಇಎಲ್ ಬಳಿಯ ಮನೆಯೊಂದರಲ್ಲಿ ಮಗು ಆಟ ಆಡುತ್ತ ಸಂಪ್ನಲ್ಲಿನ ನೀರಿಗೆ ಬಿದ್ದಿದೆ. ಇದನ್ನು ಗಮನಿಸಿದ ಮಹಿಳೆಯರು ಸಹಾಯಕ್ಕಾಗಿ ಜೋರಾಗಿ ಕೂಗಾಡಿದ್ದಾರೆ. ಇದೇ ಸಮಯದಲ್ಲಿ ಪಿಎಸ್ಐ ನಾಗರಾಜ್ ಅವರು ಠಾಣೆಗೆ ಕರ್ತವ್ಯಕ್ಕಾಗಿ ತೆರಳುವಾಗ ವಿಷಯ ತಿಳಿಸಿದ್ದಾರೆ. ತಕ್ಷಣ ಸ್ಥಳಕ್ಕೆ ತೆರಳಿ ಕೂಡಲೇ ಸಂಪ್ನ ನೀರಿಗೆ ಬಿದ್ದು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಗುವನ್ನ ರಕ್ಷಣೆ ಮಾಡಿದ್ದಾರೆ. ಸ್ಥಳೀಯ ಆಸ್ಪತ್ರೆಯಲ್ಲಿ ಮಗುವಿಗೆ ಸದ್ಯ ಚಿಕಿತ್ಸೆ ಮುಂದುವರೆದಿದ್ದು ಮಗು ಪ್ರಾಣಾಪಾಯದಿಂದ ಪಾರಾಗಿದೆ. ಪಿಎಸ್ಐ ಅವರ ಕಾರ್ಯಕ್ಕೆ ಜನರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
- Advertisement -








