Sunday, June 7, 2026
spot_imgspot_img
spot_imgspot_img

ಸುಳ್ಯ: ಕಾಲು ಜಾರಿ ಕೆರೆಗೆ ಬಿದ್ದು ಯುವಕ ಮೃತ್ಯು

- Advertisement -
- Advertisement -

ಸುಳ್ಯ,: ಯುವಕನೋರ್ವ ಕಾಲು ಜಾರಿ ತೋಟದಲ್ಲಿದ್ದ ಕೆರೆಗೆ ಬಿದ್ದು ಮೃತಪಟ್ಟ ಘಟನೆ ಇಂದು ಉಬರಡ್ಕದಲ್ಲಿ ನಡೆದಿದೆ.

ಮೃತ ಯುವಕನನ್ನು ಸುಳ್ಯ ಶಾಂತಿನಗರ ನಿವಾಸಿ ದಿ. ನಾರಾಯಣ ಮುಕರಿಯವರ ಪುತ್ರ ಯೋಗೀಶ್ (36) ಎಂದು ಗುರುತಿಸಲಾಗಿದೆ.

ಅವಿವಾಹಿತರಾಗಿದ್ದ ಯೋಗೀಶ್ ಸುಳ್ಯ ಚೆನ್ನಕೇಶವ ದೇವಸ್ಥಾನದಲ್ಲಿ ಸಹಾಯಕನಾಗಿ ಕೆಲಸ ಮಾಡಿಕೊಂಡಿದ್ದರು., ಅವರನ್ನು ರಮೇಶ್ ಬೈಪಡಿತ್ತಾಯ ಎಂಬವರು ಉಬರಡ್ಕಕ್ಕೆ ಮರ ಕಡಿದ ಜಾಗದ ಅಳತೆಗಾಗಿ ಕರೆದುಕೊಂಡು ಹೋಗಿದ್ದರೆನ್ನಾಗಿದೆ. ಅಳತೆ ಮಾಡುವ ಸಂದರ್ಭದಲ್ಲಿ ಬೇರೊಂದು ತೋಟವನ್ನು ಹಾದು ಹೋಗಬೇಕಾಗಿದ್ದು, ಆ ಸಂದರ್ಭ ಅವರು ಕಾಲು ಜಾರಿ ತೋಟದ ಕೆರೆಗೆ ಬಿದ್ದು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಶವವನ್ನು ಸುಳ್ಯ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.

- Advertisement -

Related news

error: Content is protected !!