Wednesday, June 17, 2026
spot_imgspot_img
spot_imgspot_img

ಕಾಡು ಹಂದಿ ದಾಳಿಗೆ ಮಹಿಳೆ ಬಲಿ..!

- Advertisement -
- Advertisement -

ಜೋಳ ಕಟಾವು ಮಾಡಲು ಜಮೀನಿಗೆ ತೆರಳಿದ್ದಾಗ ಮಹಿಳೆ ಮೇಲೆ ಕಾಡು ಹಂದಿ ದಾಳಿ ಮಾಡಿರುವ ಘಟನೆ ಬೀದರ್ ತಾಲೂಕಿನ ಹೊಕ್ರಾಣ (ಕೆ) ಗ್ರಾಮದಲ್ಲಿ ನಡೆದಿದೆ.

ಮೃತಪಟ್ಟ ಮಹಿಳೆ ಹೊಕ್ರಾಣ (ಕೆ) ಗ್ರಾಮದ ಕವಿತಾ ರವಿಕುಮಾರ್ (45) ಎಂದು ಗುರುತಿಸಲಾಗಿದೆ.

ಅಹಮ್ಮದ್ ಅಲಿ ಖಾಜಾ ಸಾಬ್ ಎಂಬುವರ ಜಮೀನಿಗೆ ಜೋಳ ಕಟಾವು ಮಾಡಲೆಂದು ನಾಲ್ವರು ಮಹಿಳೆಯರು ಹೋಗಿದ್ದರು. ಈ ವೇಳೆ ಮಹಿಳೆ ಮೇಲೆ ಏಕಾಏಕಿ ಕಾಡು ಹಂದಿ ದಾಳಿ ಮಾಡಿದ್ದರಿಂದ ಗಂಭಿರವಾಗಿ ಗಾಯಗೊಂಡಿದ್ದರು. ತಕ್ಷಣ ಗಾಯಾಳುವನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಗುತ್ತಿತ್ತು. ಆದ್ರೆ ಮಾರ್ಗ ಮಧ್ಯೆಯೇ ಮಹಿಳೆ ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಸಚಿವರು ಹೊಕ್ರಾಣ (ಕೆ) ಗ್ರಾಮಕ್ಕೆ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಲಿದ್ದಾರೆ. ಮನ್ನಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!