Monday, June 15, 2026
spot_imgspot_img
spot_imgspot_img

ಫ್ಯಾನ್ಸಿ ನಂಬರ್‌ ಕೊಡುವುದಾಗಿ 65 ಸಾವಿರ ರೂಪಾಯಿ ವಂಚನೆ

- Advertisement -
- Advertisement -

ಬೆಂಗಳೂರು: ಫ್ಯಾನ್ಸಿ ನಂಬರ್‌ ಕೊಡುವುದಾಗಿ ವ್ಯಕ್ತಿಯೊಬ್ಬರಿಗೆ ಯಾಮಾರಿಸಿ 65 ಸಾವಿರ ರೂಪಾಯಿ ವಂಚಿಸಿರೋ ಪ್ರಕರಣ ಬೆಳಕಿಗೆ ಬಂದಿದೆ.
ಉದ್ಯಮಿ ವಿಮಲ್ ‌ಕುಮಾರ್ ಮೋಸ ಹೋದವರು. ಆದಿತ್ಯಾ ಜೈನ್ ಎಂಬಾತ ವಂಚನೆ ಮಾಡಿದ್ದಾನೆ ಎಂದು ವಿಮಲ್ ‌ಕುಮಾರ್‌ ಸೈಬರ್ ಠಾಣೆಯಲ್ಲಿ  ದೂರು ದಾಖಲಿಸಿದ್ದಾರೆ.

ಫ್ಯಾನ್ಸಿ ನಂಬರ್ 9000000000 ಲಭ್ಯವಿದೆ. ಇದನ್ನ ಪಡೆಯಲು ಸಂಪರ್ಕಿಸಿ ಅಂತ ನಂಬರ್ ಹಾಕಿರುವ ಮೆಸೇಜ್ ಬಂದಿತ್ತು. ಹೀಗಾಗಿ ವಿಮಲ್ ‌ಕುಮಾರ್‌ ಕರೆ ಮಾಡಿದಾಗ, ಆದಿತ್ಯ ಜೈನ್ ಎಂದು ಪರಿಚಯಿಸಿಕೊಂಡ ವ್ಯಕ್ತಿ, ಫ್ಯಾನ್ಸಿ ನಂಬರ್ ಬಗ್ಗೆ ಹೇಳಿದ್ದಾನೆ. ಇದು ತುಂಬಾ ಬೇಡಿಕೆಯಲ್ಲಿದೆ ಎಂದು ಹೇಳಿ ನಂಬರ್ ಬೇಕಾದ್ರೆ 65 ಸಾವಿರ ರೂಪಾಯಿ ಹಣ ಟ್ರಾನ್ಸ್​​ಫರ್ ಮಾಡುವಂತೆ ಹೇಳಿದ್ದಾನೆ. ಆದ್ರೆ ಹಣ ಜಮೆ ‌ಆದ ಬಳಿಕ ಮೊಬೈಲ್‌ ಸ್ವಿಚ್ ಆಫ್‌ ಮಾಡಿಕೊಂಡಿದ್ದಾನೆ.
ಸದ್ಯ ಈ ಕುರಿತು ವಿಮಲ್, ಆಗ್ನೇಯ ವಿಭಾಗದ ಸೈಬರ್ ಠಾಣೆಗೆ ದೂರು ನೀಡಿದ್ದಾರೆ.

- Advertisement -

Related news

error: Content is protected !!