Thursday, July 3, 2025
spot_imgspot_img
spot_imgspot_img

ಶಿರ್ತಾಡಿ : (ಮಾರ್ಚ್ 23) ಶಿರ್ತಾಡಿಯಲ್ಲಿ “ಪಿಲಿಗುಡ್ಡೆದ ಪಿಲಿಚಂಡಿ” ಯಕ್ಷಗಾನ ಬಯಲಾಟ

- Advertisement -
- Advertisement -

ಶಿರ್ತಾಡಿ : ಕಳೆದ ಹತ್ತು ವರ್ಷಗಳಲ್ಲಿ ಕಲಾ ಕ್ಷೇತ್ರಕ್ಕೆ ತಮ್ಮದೇ ಆದ ಸೇವೆ ನೀಡುತ್ತಾ ಬಂದಿರುವ ಶಿರ್ತಾಡಿಯ ಕರಾವಳಿ ಫ್ರೆಂಡ್ಸ್ ಸರ್ಕಲ್ ನ ವತಿಯಿಂದ ಹನ್ನೊಂದನೇ ವರ್ಷದ ಯಕ್ಷಗಾನ ಬಯಲಾಟ ಮಾರ್ಚ್ 23 ರಂದು ಶ್ರೀ ವೀರಭದ್ರ ದಶಾವತಾರ ಯಕ್ಷಗಾನ ಮಂಡಳಿ, ಶ್ರೀ ಕ್ಷೇತ್ರ ಹಿರಿಯಡ್ಕ ಮೇಳದವರಿಂದ “ಪಿಲಿಗುಡ್ಡೆದ ಪಿಲಿಚಂಡಿ” ಎಂಬ ಕಾಲಮಿತಿಯ ಯಕ್ಷಗಾನ ಬಯಲಾಟ ಶಿರ್ತಾಡಿಯಲ್ಲಿ ನಡೆಯಲಿದೆ.

ಕಳೆದ ಹತ್ತು ವರ್ಷಗಳಲ್ಲಿ ಕರಾವಳಿ ಫ್ರೆಂಡ್ಸ್ ಸರ್ಕಲ್ ಹಲವು ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಬಂದಿದ್ದು ಜೊತೆಗೆ ಹಲವಾರು ಮಂದಿ ಸಾಧಕರನ್ನು ಗುರುತಿಸಿ ಸನ್ಮಾನಿಸಿದೆ. ವರ್ಷಂಪ್ರತಿ ವಿಜೃಂಭಣೆಯಿಂದ ಯಕ್ಷಗಾನ ಬಯಲಾಟ ನಡೆಯುತ್ತಿದ್ದು ಈ ಬಾರಿ ಕೂಡಾ ವಿಜೃಂಭಣೆಯಿಂದ ನಡೆಯಲಿದೆ,ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಇದೆ, ಶಿರ್ತಾಡಿ ಪರಿಸರದ ಕಲಾಭಿಮಾನಿಗಳು ಪ್ರತಿ ವರ್ಷದಂತೆ ಈ ವರ್ಷ ಕೂಡಾ ಸಹಕಾರ ನೀಡಲಿದ್ದಾರೆಂದು ಸಂದೀಪ್ ಸಾಲ್ಯಾನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!