Sunday, June 29, 2025
spot_imgspot_img
spot_imgspot_img

ಧರ್ಮಸ್ಥಳ: ತಾಯಿ ತನ್ನ ಒಂಭತ್ತು ತಿಂಗಳ ಮಗುವಿನೊಂದಿಗೆ ನಾಪತ್ತೆ

- Advertisement -
- Advertisement -

ಧರ್ಮಸ್ಥಳ: ತಾಯಿ ಪುಟ್ಟ ಒಂಭತ್ತು ತಿಂಗಳ ಮಗುವಿನೊಂದಿಗೆ ನಾಪತ್ತೆಯಾದ ಘಟನೆ ಕಳೆಂಜ ಗ್ರಾಮದ ಕಾರ್ಯತ್ತಡ್ಕದಲ್ಲಿ ನಡೆದಿದೆ.

ಕಳೆಂಜ ಗ್ರಾಮದ ಕಾರ್ಯತ್ತಡ್ಕ ನಿವಾಸಿ ವೆಂಕಪ್ಪ ಗೌಡ ಅವರ ಪತ್ನಿ ಜಯಶ್ರೀ (29ವ) ಹಾಗೂ ಅವರ ಪುತ್ರಿ ರುಷಿಕಾ (9ತಿಂಗಳು) ನಾಪತ್ತೆಯಾದವರು.

ಮಾ.22ರಂದು ರಾತ್ರಿ ಜಯಶ್ರೀ ರೂಮಿನಲ್ಲಿ ತನ್ನ ಇಬ್ಬರು ಮಕ್ಕಳೊಂದಿಗೆ ಮಲಗಿದ್ದು, ವೆಂಕಪ್ಪ ಗೌಡ ಅವರು ಮನೆಯ ಹಾಲ್ ನಲ್ಲಿ ಮಲಗಿದ್ದರು. ಮರುದಿನ ಬೆಳಿಗೆ ವೆಂಕಪ್ಪ ಗೌಡರು ಎದ್ದು ನೋಡಿದಾಗ ಮನೆಯಲ್ಲಿ ಪತ್ನಿ ಜಯಶ್ರೀ ಹಾಗೂ 9 ತಿಂಗಳ ಮಗು ರುಷಿಕಾ ನಾಪತ್ತೆಯಾಗಿದ್ದರೆನ್ನಲಾಗಿದೆ.

ಈ ಬಗ್ಗೆ ವೆಂಕಪ್ಪ ಗೌಡ ಅವರು ನೀಡಿದ ದೂರಿನಂತೆ ಧರ್ಮಸ್ಥಳ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ: 20/2024ರಂತೆ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!