Sunday, June 29, 2025
spot_imgspot_img
spot_imgspot_img

ಬ್ರಹ್ಮಾವರ: ನಡುರಸ್ತೆಯಲ್ಲೇ ಹೊತ್ತಿ ಉರಿದ ಎಲೆಕ್ಟ್ರಿಕ್ ಸ್ಕೂಟರ್..!

- Advertisement -
- Advertisement -

ಬ್ರಹ್ಮಾವರ: ನಡುರಸ್ತೆಯಲ್ಲೇ ಎಲೆಕ್ಟ್ರಿಕ್ ಸ್ಕೂಟರ್ ಗೆ ಬೆಂಕಿ ಹೊತ್ತಿಕೊಂಡ ಘಟನೆ ಬ್ರಹ್ಮಾವರದಲ್ಲಿ ನಡೆದಿದೆ.

ಏಪ್ರಿಲ್ 01 ಸೋಮವಾರ ಬೆಳಗ್ಗೆ ಬ್ರಹ್ಮಾವರದ ಆಕಾಶವಾಣಿ ಜಂಕ್ಷನ್ ಬಳಿಯಲ್ಲಿ ಈ ಘಟನೆ ನಡೆದಿದ್ದು ಘಟನೆಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಘಟನೆಯಿಂದಾಗಿ ವಾಹನ ಸಂಪೂರ್ಣ ಸುಟ್ಟು ಕರಕಲಾಗಿದೆ. ಸ್ಥಳೀಯರು ನೀರು ಹಾಕಿ ಬೆಂಕಿ ನಂದಿಸಲು ಯತ್ನಿಸಿದರಾದರೂ ಫಲಕಾರಿಯಾಗಲಿಲ್ಲ.

ವಾತಾವರಣದಲ್ಲಿ ಶಾಖದ ಅಲೆಗಳ ಹೆಚ್ಚಳದಿಂದಾಗಿ ಅನೇಕ ವಾಹನಗಳು ಬಿಸಿಯಾಗುತ್ತಿವೆ ಮತ್ತು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿವೆ. ಇದು ಕೂಡ ಘಟನೆಗೆ ಕಾರಣವಾಗಿರಬಹುದು ಎಂದು ಪ್ರವಾಸಿ ವಾಹನ ಮಾಲೀಕರೋರ್ವರು ದಾಯ್ಜಿವಲ್ಡ್ ಗೆ ತಿಳಿಸಿದ್ದಾರೆ.

- Advertisement -

Related news

error: Content is protected !!