Thursday, August 6, 2026
spot_imgspot_img
spot_imgspot_img

ಬೈಕ್ ಗೆ ‌ಕಾಡು ಹಂದಿ ‌ಡಿಕ್ಕಿ; ಸವಾರ ಸಾವು..!

- Advertisement -
- Advertisement -

ಬೈಕ್ ಗೆ ‌ಕಾಡು ಹಂದಿ ‌ಡಿಕ್ಕಿಯಾಗಿ ಸವಾರ ಮೃತಪಟ್ಟ ಘಟನೆ ಪಾವಗಡ ಮದ್ರೇನಹಳ್ಳಿ ‌ಅರಣ್ಯ ಪ್ರದೆಶದ ಬಳಿ ನಡೆದಿದೆ.

ಮೃತಪಟ್ಟವರನ್ನು ತಾಲೂಕಿನ ಬೆಳ್ಳಿಬಟ್ಟಲ ಗ್ರಾಮದ ಗ್ರಾ.ಪಂ.ಸದಸ್ಯ ಕೃಷ್ಣಪ್ಪ ಎಂದು ಗುರುತಿಸಲಾಗಿದೆ.

ಕೃಷ್ಣಪ್ಪ ಹಾಗೂ ಹೆಂಡತಿ ಗುಂಡಮ್ಮ ರಾತ್ರಿ ವೇಳೆ ತಾಲೂಕಿನ ಅಚ್ಚಮ್ಮನಹಳ್ಳಿ ಗ್ರಾಮದಿಂದ ತಮ್ಮ ಸ್ವಗ್ರಾಮ ಬೆಳ್ಳಿ ಬಟ್ಟಲುಗೆ ಹೋಗುವಾಗ ಶೈಲಾಪುರ ಮತ್ತು‌ಕೊಟಗುಡ್ಡ ಗ್ರಾಮಗಳ ‌ಮಧ್ಯೆ ಮದ್ರೇನಹಳ್ಳಿ ಎಂಬ ‌ಅರಣ್ಯ ಪ್ರದೆಶದ ಬಳಿ‌ ಆಕಸ್ಮಿಕವಾಗಿ ಬೈಕ್ ಗೆ ಕಾಡು ಹಂದಿಗಳು ‌ಡಿಕ್ಕಿ ಹೊಡೆದಿದೆ.

ಈ ಪರಿಣಾಮ ಇಬ್ಬರೂ ಬೈಕ್ ನಿಂದ ಕೆಳಗೆ ಬಿದ್ದು ಗಾಯಗೊಂಡಿದ್ದರು. ಅದೇ ರಸ್ತೆಯಲ್ಲಿ ಚುನಾವಣಾ ಪ್ರಚಾರ ಮುಗಿಸಿಕೊಂಡು ಹೋಗುತಿದ್ದ ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ವಾಹನ ನಿಲ್ಲಿಸಿ ತಕ್ಷಣ ಅಂಬುಲೆನ್ಸ್ ಗೆ ಕರೆ ಮಾಡಿ ಅವರನ್ನು ಪಾವಗಡ ಸರ್ಕಾರಿ ಆಸ್ಪತ್ರೆಗೆ ಕಳಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಕೃಷ್ಣಪ್ಪ ಮೃತಪಟ್ಟಿದ್ದಾರೆ.

- Advertisement -

Related news

error: Content is protected !!