


ವಿಟ್ಲ: ದಿನದಿಂದ ದಿನಕ್ಕೆ ಚಿನ್ನದ ಬೆಲೆ ಗಗನಕ್ಕೇರುತ್ತಿದ್ದು, ಯಾವಾಗ ಚಿನ್ನದ ಬೆಲೆ ಕಡಿಮೆಯಾಗುತ್ತದೆ ಎಂದು ಕಾದು ಕುಳಿತ ಜನರಿಗೆ ಸಪ್ತ ಜ್ಯುವೆಲ್ಸ್ ಅಕ್ಷಯ ತೃತೀಯಾ ಅಂಗವಾಗಿ ಚಿನ್ನಾಭರಣಗಳ ಮೇಲೆ ವಿಶೇಷ ಆಫರ್‌ಗಳನ್ನು ನೀಡಿತ್ತು. ವಿಟ್ಲ ಪುತ್ತೂರು ಮುಖ್ಯ ರಸ್ತೆಯ ಸ್ಮಾರ್ಟ್ ಸಿಟಿ ಸಂಕೀರ್ಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಪ್ತ ಜ್ಯುವೆಲ್ಸ್ ಚಿನ್ನಾಭರಣ ಪ್ರಿಯರನ್ನು ತನ್ನದೇ ವಿಶೇಷ ಆಕರ್ಷಣೆಯೊಂದಿಗೆ ತನ್ನತ್ತ ಸೆಳೆಯುತ್ತಿದ್ದು, ಅಕ್ಷಯ ತೃತೀಯಾದಂದು ನೂರಾರು ಗ್ರಾಹಕರು ಚಿನ್ನ ಖರೀದಿಸಿದರು.
ಸುಸಜ್ಜಿತ ಕಟ್ಟಡ, ವಿಶಾಲ ಪಾರ್ಕಿಂಗ್ ಜೊತೆಗೆ ಹಲವಾರು ಸುವ್ಯವಸ್ಥೆಗಳನ್ನು ಒಳಗೊಂಡಿರುವ ಸಪ್ತ ಜ್ಯುವೆಲ್ಸ್ ಉತ್ತಮ ಗುಣಮಟ್ಟ, ಹಾಗೂ ವಿಭಿನ್ನ ಶೈಲಿಯ ಚಿನ್ನಾಭರಣಗಳ ಸಂಗ್ರಹಗಳೊಂದಿಗೆ ಜಿಲ್ಲೆ ಹಾಗೂ ಹೊರ ಜಿಲ್ಲೆಯಾದ್ಯಂತ ಪ್ರಸಿದ್ಧಿ ಹೊಂದಿದೆ.
ಸಪ್ತ ಜ್ಯುವೆಲ್ಸ್‌ನಲ್ಲಿ ಅಕ್ಷಯ ತೃತೀಯಾ ಅಂಗವಾಗಿ ಪ್ರತಿ ಗ್ರಾಂ ಚಿನ್ನದ ಆಭರಣ ಖರೀದಿಗೆ 125ರೂ ವರೆಗೆ ಕಡಿತ, ಬೆಳ್ಳಿ ಆಭರಣಗಳಿಗೆ ಶೇ.10ರವರೆಗೆ ಕಡಿತ, ಬೆಳ್ಳಿ ಪರಿಕರಗಳಿಗೆ ಶೇ.5ರಷ್ಟು ಕಡಿತ ನೀಡಲಾಗಿತ್ತು. ಈ ಹಿನ್ನಲೆ ನೂರಕ್ಕೂ ಅಧಿಕ ಗ್ರಾಹಕರು ತಮ್ಮ ಇಷ್ಟದ ಚಿನ್ನಾಭರಣಗಳ ಖರೀದಿಗಾಗಿ ಸಪ್ತ ಜ್ಯುವೆಲ್ಸ್‌ಗೆ ಆಗಮಿಸಿ, ಆಭರಣಗಳನ್ನು ಖರೀದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪಾಲುದಾರರಾದ ಅಜಕ್ಕಳ ಶ್ಯಾಮ ಭಟ್, ಸುದರ್ಶನ್ ಕುಮಾರ್ ಇರ್ಕಲಾಜೆ, ಸುಕುಮಾರ ಕಲ್ಲಮಜಲು, ನಿಶಾ ಪ್ರಶಾಂತ ಸರಳಾಯ, ಕೃಷ್ಣ ಪ್ರಸಾದ್ ಕಡವ, ಗೋವಿಂದರಾಜ ಕಲ್ಲಮಜಲು, ದೇವಿಪ್ರಸಾದ್ ಚಂಗಲ್ಪಾಡಿ, ಶಿವಪ್ರಕಾಶ್ ಪಂಜಿಬಲ್ಲೆ, ಸಿಬ್ಬಂದಿಗಳಾದ ಗಣೇಶ್ ಕಿರಣ್, ಜಯ ಪ್ರಕಾಶ್, ಜಗದೀಶ್, ಚರಣ್, ಭವ್ಯಾ, ರಮ್ಯಾ, ತೃಪ್ತಿ, ಹರ್ಷಿತಾ ಉಪಸ್ಥಿತರಿದ್ದರು.
ಸಪ್ತ ಜ್ಯುವೆಲ್ಸ್ ಮಳಿಗೆಯಲ್ಲಿ ವಿವಿಧ ವಿನ್ಯಾಸದ ಚಿನ್ನಾಭರಣಗಳು ಗ್ರಾಹಕರನ್ನು ಆಕರ್ಷಿಸುತ್ತಿದ್ದು, ಅವುಗಳಲ್ಲಿ ಪಾರಂಪರಿಕ ಮಲ್ಲಿಗೆ ಮೊಗ್ಗು ನೆಕ್ಲೀಸ್, ಮೊಹನ ಮಾಲಾ, ಕೊತ್ತಂಬರಿ ಸರ, ರುದ್ರಾಕ್ಷಮಾಲಾ, ತುಳಸಿಮಣಿಸರ, ನವರತ್ನ ಸರ, ಕಠಾಣಿ ಸರ, ಗಿಳಿ ಓಲೆ ನೆಕ್ ಲೇಸ್ ಸೆಟ್ ವಿಶೇಷವಾಗಿದೆ. ಟೆಂಪಲ್ ಕಲೆಕ್ಷನ್ ನಲ್ಲಿ ವಿವಿಧ ರೀತಿಯ ಮೆರುಗನ್ನು ಕೊಡುವ ವಿನ್ಯಾಸಗಳು, ರಿಚ್ ಲುಕ್ ನೀಡುವ ರುಬಿ, ಎಮರಾಲ್ಡ್, ಸಿ. ಝಡ್, ಸ್ಟೋನ್ ನೆಕ್ಸಸ್, ಲೈಟ್ ವೈಟ್ ಕೋಲ್ಕತ್ತ ವೆಡ್ಡಿಂಗ್ ಸೆಟ್, ನೆಕ್ಲೀಸ್, ಪೆಂಡೆAಟ್ಸ್ ಗಳು, ಬ್ಯಾಂಡ್ ರಿಂಗ್, ಮಾಟಿ, ಮುಂದಲೆ, ಡಿಫೆರೆಂಟ್ ಆಂಡ್ ಸ್ಪೆಷಲ್ ಕಲೆಕ್ಷನ್ ಇನ್ ಕೋಲಾಪುರ ಲೈಟ್ ವೈಟ್ ವ್ಯಾಕ್ಸ್ ಮಾಲಾ, ವೆರೈಟಿ ಆಫ್ ಬೆಂಗಾಲಿ ಹ್ಯಾಂಡ್ ಮೇಡ್ ಚೈನ್ಸ್. ಕೊಯಂಬುತ್ತೂರು ಸ್ಪೆಷಲ್ ಕಟ್ಟಿಂಗ್ ಚೈನ್, ಮುಸ್ಸಿ ಚೈನ್, ರೇಡಿಯೋ ಚೈನ್, ಕೇರಳ ಹ್ಯಾಂಡ್ ಮೇಡ್ ವೈನ್ಸ್, ಇಂಡೋ ಇಟಲಿಯನ್ ಚೈನ್ಸ್ ಗಳು, ವಿವಾಹ ಸಂಗ್ರಹ, ಪದಕಗಳ ಸಂಗ್ರಹ, ವಿವಿಧ ನಮೂನೆಯ ಉಂಗುರ, ಜುಮ್ಮ ಸಂಗ್ರಹ, ವಿಶೇಷ ಮಾಂಗಲ್ಯ ಸರ, ಗಿಫ್ಟ್ ಆರ್ಟಿಕಲ್ಸ್ ಇವುಗಳೆಲ್ಲವೂ ಗ್ರಾಹಕರನ್ನು ಇನ್ನಷ್ಟು ಸೆಳೆಯುತ್ತಿದೆ.
ಬೆಳ್ಳಿಯ ವಿಶೇಷತೆಗಳಲ್ಲಿ ಆರ್ನಮೆಂಟ್ಸ್, ಸ್ಟಡ್ಸ್, ರಿಂಗ್ಸ್, ಚೈನ್, ಹ್ಯಾಂಡ್ ಮೇಡ್ ದೈವ ದೇವರ ಪರಿಕರಗಳು, ಆಭರಣಗಳು, ದೇವರ ವಿಗ್ರಹಗಳು, ಕರ್ಪೂರಾರತಿ, ಏಕಾರತಿ, ಶಂಕಾರತಿ, ಸರ್ಪಾರತಿ, ಕೂರ್ಮಾರತಿ, ಕಾಮಾಕ್ಷಿ ದೀಪ ಸೇರಿ ವಿವಿಧ ವಿನ್ಯಾಸದ ಬೆಳ್ಳಿಯ ಆರತಿಗಳು ಲಭ್ಯವಿದ್ದು ಬೆಳ್ಳಿ ಪ್ರಿಯರನ್ನು ತನ್ನತ್ತ ಸೆಳೆಯುತ್ತಿದೆ.