- Advertisement -
- Advertisement -



ಮುಲ್ಕಿ: ಸ್ಕೂಟರ್ ವೊಂದು ಏಕಾಏಕಿ ರಸ್ತೆ ದಾಟಿದ ಸೆಕ್ಯೂರಿಟಿ ಗಾರ್ಡ್ ಗೆ ಡಿಕ್ಕಿ ಹೊಡೆದು ಸ್ಕೂಟರ್ ಸವಾರರು ಸಹಿತ ಮೂವರು ಗಂಭೀರ ಗಾಯಗೊಂಡಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಕೊಲ್ನಾಡು ಭಾರತ್ ಬೆನ್ಸ್ ಸರ್ವಿಸ್ ಸ್ಟೇಷನ್ ಬಳಿ ಸೋಮವಾರ ರಾತ್ರಿ ವರದಿಯಾಗಿದೆ.
ಗಾಯಗೊಂಡವರನ್ನು ಭಾರತ್ ಬೆನ್ಸ್ ಸರ್ವಿಸ್ ಸ್ಟೇಷನ್ ನ ಸೆಕ್ಯೂರಿಟಿ ಗಾರ್ಡ್. ಕಾರ್ಕಳ ಬೆಳ್ಳಣ್ ಮೂಲದ ದಂಪತಿ ಎಂದು ತಿಳಿದು ಬಂದಿದೆ.
ಬೆಳ್ಮಣ್ ಮೂಲದ ದಂಪತಿ ಮಂಗಳೂರಿನಿಂದ ಬೆಳ್ಮಣ್ ಗೆ ಹೊಗುತ್ತಿದ್ದ ವೇಳೆ ಭಾರತ್ ಬೆನ್ಸ್ ಸರ್ವಿಸ್ ಸ್ಟೇಷನ್ ನ ಸೆಕ್ಯೂರಿಟಿ ಗಾರ್ಡ್ ಏಕಾಏಕಿ ರಸ್ತೆ ದಾಟಿದ ಪರಿಣಾಮ ಕಂಗಾಲಾದ ದ್ವಿಚಕ್ರ ಸವಾರ ಸೆಕ್ಯೂರಿಟಿ ಗಾರ್ಡ್ ಗೆ ಡಿಕ್ಕಿ ಹೊಡೆದಿದ್ದಾರೆ .
ಘಟನೆಯಿಂದ ಮೂವರೂ ಗಂಭೀರ ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಎಂದು ತಿಳಿದು ಬಂದಿದೆ
ಘಟನೆಗೆ ಸಂಬಂಧಿಸಿ ಮಂಗಳೂರು ಉತ್ತರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.
- Advertisement -