Thursday, June 4, 2026
spot_imgspot_img
spot_imgspot_img

ಶ್ರೀ ದೇವತಾ ಸಮಿತಿ ವಿಟ್ಲ ಇದರ 49 ನೇ ವರ್ಷದ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ

- Advertisement -
- Advertisement -

ವಿಟ್ಲ(ಅ 21): ಶ್ರೀ ದೇವತಾ ಸಮಿತಿ ವಿಟ್ಲ ಇದರ ೪೯ ನೇ ವರ್ಷದ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವವು ವಿಟ್ಲ ಶ್ರೀ ಪಂಚಲಿಂಗೇಶ್ವರರ ದೇವಸ್ಥಾನದ ಸಭಾ ಭವನದಲ್ಲಿ ನಡೆಯಿತು. ಈ ಕಾರ್ಯಕ್ರಮಕ್ಕೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಸ್ವಯಂ ಸೇವಕ ಕರಿಯಪ್ಪ ಮೂಲ್ಯ ಕಟ್ಟೆ ಇವರು ದೀಪ ಬೆಳಗಿಸಿ ಚಾಲನೆ ನೀಡಿದರು.


ವೇದಮೂರ್ತಿ ಮಂಜೇಶ್ವರ ವಿಕಾಸ್ ಭಟ್ ವಿಗ್ರಹ ಪ್ರತಿಷ್ಠೆ ನೆರವೇರಿಸಿದರು. ಸಮಿತಿ ಅಧ್ಯಕ್ಷ ಎಂ ರಾಧಾಕೃಷ್ಣ ನಾಯಕ್ ಧಗವಜಾರೋಹಣ ಮಾಡಿ ಸ್ವಾಗತಿಸಿದರು. ತನುಜ್ ಶೆಣೈ ವಂದೇಮಾತರಂ ಗೀತೆ ಹಾಡಿದರು. ಕೃಷ್ಣಯ್ಯ ಕೆ ವಿಟ್ಲ ಅರಮನೆ ಸಭಾಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಜಗನ್ನಾಥ ಸಾಲಿಯಾನ್, ವಿಟ್ಲ ವಲಯ ಗ್ರಾರೇಜ್ ಮಾಲಕರ ಸಂಘಧ ಅಧ್ಯಕ್ಷ ಲಕ್ಷ್ಮಣ ಪೂಜಾರಿ ಮತ್ತು ಪುಷ್ಪಲತಾ ಭಾಗವಹಿಸಿದ್ದರು.


ಸಮಿತಿಯ ಪದಾಧಿಕಾರಿಗಳಾದ ಮೋನಪ್ಪ ಗೌಡ, ಕೃಷ್ಣಪ್ರಸಾದ ಶೆಣೈ, ಶೀನ ಕಾಶಿಮಠ, ರಾಘವೇಂದ್ರ ಪೈ, ರವೀಂದ್ರ ಕಾಮತ್, ಸದಾಶಿವ ಆಚಾರ್ಯ, ಸುದರ್ಶನ ಪದಿಯಾರ್ ಮೊದಲಾದವರು ಉಪಸ್ಥತರಿದ್ದರು. ಕಾರ್ಯದರ್ಶಿ ಗೋಕುಲ್‌ದಾಸ್ ಶೆಣೈ ವಂದಿಸಿದರು. ಮಂಗೇಶ್ ಭಟ್ ನಿರೂಪಿಸಿದರು.

- Advertisement -

Related news

error: Content is protected !!