Saturday, June 6, 2026
spot_imgspot_img
spot_imgspot_img

ಕುಂಡಡ್ಕ : ಯೋಧರು ನಮ್ಮ ದೇಶದ ಹೆಮ್ಮೆಯ ಪುತ್ರರು, ಅವರನ್ನು‌ ಗೌರವಿಸುವುದು ಒಂದು ಪುಣ್ಯದ ಕಾರ್ಯ : ವೇಣುಗೋಪಾಲ ಶೆಟ್ಟಿ ಮರುವಾಳ

- Advertisement -
- Advertisement -

ಕುಂಡಡ್ಕ : ಯೋಧರು ನಮ್ಮ ದೇಶದ ಹೆಮ್ಮೆಯ ಪುತ್ರರು.ರಾಷ್ಟ್ರಕ್ಕಾಗಿ ಸರ್ವತ್ಯಾಗಕ್ಕೂ ಸಿದ್ಧರಾಗಿರುವರು.ಅವರನ್ನು‌
ಗೌರವಿಸುವುದು ಒಂದು ಪುಣ್ಯದ ಕಾರ್ಯವೆಂದು ಗುಣಶ್ರೀ ವಿದ್ಯಾಲಯದ ಸಂಚಾಲಕರಾದ ವೇಣುಗೋಪಾಲ ಶೆಟ್ಟಿ ಮರುವಾಳ
ತಿಳಿಸಿದರು.

ಭಾರತೀಯ ಸೇನೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾದ ಕುಳ, ಕುಂಡಡ್ಕ ನಿವಾಸಿ ಗುಂಪೆಕಲ್ಲು ದಯಾನಂದ ಗೌಡರಿಗೆ ಶಾಲಾ ಸಭಾಂಗಣದಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು . ಸನ್ಮಾನಿತರು ತಮ್ಮ ಸೇವಾ ಅನುಭವಗಳನ್ನು ವಿದ್ಯಾರ್ಥಿಗಳ ಜೊತೆಗೆ ಹಂಚಿಕೊಂಡರು . ಪ್ರೇರಣಾ ದಾಯಕ ಮಾತುಗಳನ್ನು ಆಲಿಸಿದ ಕೆಲವರು ವಿದ್ಯಾರ್ಥಿಗಳು ಸೇನೆಯಲ್ಲಿ ಸೇವೆ ಸಲ್ಲಿಸುವ ಇಂಗಿತ ವ್ಯಕ್ತಪಡಿಸಿದರು.

ವಿಟ್ಲ ಮುಡ್ನೂರು ಗ್ರಾಮಪಂಚಾಯತ್ ಅಧ್ಯಕ್ಷ ಪುನೀತ್ ಮಾಡತ್ತಾರು ಶುಭ ಹಾರೈಸಿದರು.ನಿವೃತ್ತ ಪೋಸ್ಟ್ ಮಾಸ್ಟರ್ ರಘುರಾಮ ಶೆಟ್ಟಿ ಬರೆ ಉಪಸ್ಥಿತರಿದ್ದರು.

ಮುಖ್ಯ ಗುರುಗಳಾದ ರಾಜಾರಾಮ ವರ್ಮ ಸ್ವಾಗತಿಸಿದರು.ಶಿಕ್ಷಕಿ ಪ್ರಮೀಳಾ ವಂದಿಸಿದರು.ಕಾವ್ಯಶ್ರೀ‌ ಕಾರ್ಯಕ್ರಮ ನಿರೂಪಿಸಿದರು.ವಿದ್ಯಾರ್ಥಿನಿಯರು ಪ್ರಾರ್ಥನೆ ನೆರವೇರಿಸಿದರು.

- Advertisement -

Related news

error: Content is protected !!