Wednesday, June 17, 2026
spot_imgspot_img
spot_imgspot_img

ಬಂಟ್ವಾಳ: ಸರಕಾರಿ ಬಸ್ ಡಿಕ್ಕಿ – ರಸ್ತೆ ದಾಟುತ್ತಿದ್ದ ವೃದ್ದ ಮೃತ್ಯು

- Advertisement -
- Advertisement -

ಬಂಟ್ವಾಳ: ರಸ್ತೆ ದಾಟುತ್ತಿದ್ದ ವೃದ್ದರೋರ್ವರಿಗೆ ಸರಕಾರಿ ಬಸ್ ಡಿಕ್ಕಿ ಹೊಡೆದು ಮೃತ ಪಟ್ಟ ಘಟನೆ ಜೂನ್. 9 ರಂದು ಬೆಳಿಗ್ಗೆ ತುಂಬೆಯಲ್ಲಿ ನಡೆದಿದೆ.

ತುಂಬೆ ಸಮೀಪದ ಮುದಲ್ಮೆಪಡ್ಪು ನಿವಾಸಿ ಸೇಸಪ್ಪ ಪೂಜಾರಿ (89) ಮೃತ ವ್ಯಕ್ತಿ.

ಮನೆಗೆ ಸಾಮಾಗ್ರಿಗಳನ್ನು ತರುವ ಉದ್ದೇಶದಿಂದ ತುಂಬೆ ಪೇಟೆಗೆ ಹೋಗುತ್ತಿದ್ದ ಸೇಸಪ್ಪ ಅವರು ವೈಶಾಲಿ ಹೋಟೆಲ್ ಮುಂಭಾಗದಲ್ಲಿ ರಸ್ತೆ ದಾಟುತ್ತಿದ್ದ ವೇಳೆ ಮಂಗಳೂರು ಕಡೆಯಿಂದ ಧರ್ಮಸ್ಥಳ ಕಡೆಗೆ ಹೋಗುತ್ತಿದ್ದ ಸರಕಾರಿ ಬಸ್ ಡಿಕ್ಕಿಯಾಗಿದೆ.

‌ಡಿಕ್ಕಿಯ ರಭಸಕ್ಕೆ ಗಂಭೀರವಾಗಿ ಗಾಯಗೊಂಡ ಇವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಅದಾಗಲೇ ಅವರು ಮೃತಪಟ್ಟ ‌ಬಗ್ಗೆ ವೈದ್ಯರು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಮೆಲ್ಕಾರ್ ಟ್ರಾಫಿಕ್ ಎಸ್.ಐ.ಸುತೇಶ್ ಹಾಗೂ ಸಿಬ್ಬಂದಿಗಳು ಭೇಟಿ ‌ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

Related news

error: Content is protected !!