- Advertisement -
- Advertisement -
ಬಂಟ್ವಾಳ: ಬೈಕ್ ಸ್ಕಿಡ್ ಆಗಿ ಅಡ್ಡ ಬಿದ್ದ ಪರಿಣಾಮ ಸಹಸವಾರೆಯಾಗಿ ಪ್ರಯಾಣಿಸುತ್ತಿದ್ದ ಮಹಿಳೆಯೋರ್ವಳು ಗಂಭೀರವಾಗಿ ಗಾಯಗೊಂಡು ಮೃತಪಟ್ಟ ಘಟನೆ ಕಲ್ಪನೆ ಸಮೀಪದ ಕುಂಟಲ್ ಪಾಡಿ ಎಂಬಲ್ಲಿ ರಾತ್ರಿ ವೇಳೆ ನಡೆದಿದೆ.
ಬಿಸಿರೋಡಿನ ಕೊಡಂಗೆ ನಿವಾಸಿ ಮೋಹಿನಿ ಶೆಟ್ಟಿ (68) ಮೃತಪಟ್ಟ ಮಹಿಳೆ.
ಮೋಹಿನಿ ಶೆಟ್ಟಿಯವರು ಕಲ್ಪನೆಯಲ್ಲಿರುವ ಮಗನ ಮನೆಗೆ ಹೋಗುತ್ತಿದ್ದ ವೇಳೆ ಘಟನೆ ನಡೆದಿದ್ದು, ಮನೆಯ ಪಕ್ಕದ ವ್ಯಕ್ತಿಯೊರ್ವನ ಬೈಕಿನಲ್ಲಿ ಹಿಂಬದಿಯಲ್ಲಿ ಕುಳಿತುಕೊಂಡು ಪ್ರಯಾಣಿಸುತ್ತಿದ್ದ ವೇಳೆ ಕುಂಟಲ್ ಪಾಡಿ ಎಂಬಲ್ಲಿ ಬೈಕ್ ಸ್ಕಿಡ್ ಆಗಿ ಅಡ್ಡ ಬಿದ್ದ ಪರಿಣಾಮ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯವಾಗಿದ್ದು, ಕೂಡಲೇ ಮಹಿಳೆಯನ್ನು ಬಂಟ್ವಾಳ ಆಸ್ಪತ್ರೆಗೆ ದಾಖಲಿಸಿದರೂ, ಅದಾಗಲೇ ಮಹಿಳೆ ಮೃತಪಟ್ಟ ಬಗ್ಗೆ ವೈದ್ಯರು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಮೆಲ್ಕಾರ್ ಟ್ರಾಫಿಕ್ ಎಸ್.ಐ.ಸುತೇಶ್ ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
- Advertisement -