Wednesday, June 24, 2026
spot_imgspot_img
spot_imgspot_img

*ಅಳಕೆಮಜಲು ಶ್ರೀ ಶಾರದಾಂಭ ಭಜನ ಮಂಡಳಿ ಅಶೋಕ ನಗರದಲ್ಲಿ 38ನೇ ವರ್ಷದ ನವರಾತ್ರಿ ಪೂಜೆ ಮತ್ತು ಶಾರದೋತ್ಸವ*

- Advertisement -
- Advertisement -

ಅಳಕೆಮಜಲು ಶ್ರೀ ಶಾರದಾಂಭ ಭಜನ ಮಂಡಳಿ ಅಶೋಕ ನಗರದಲ್ಲಿ 38ನೇ ವರ್ಷದ ನವರಾತ್ರಿ ಪೂಜೆ ಮತ್ತು ಶಾರದೋತ್ಸವ ನಡೆಯಿತು.ಕೊರೂನ ಹಿನ್ನೆಲೆಯಲ್ಲಿ ಸರಳವಾಗಿ ಶಾರದೋತ್ಸವ ವನ್ನು ಆಚರಿಸಲಾಯಿತು.

9 ದಿನಗಳು ಪ್ರತಿ ದಿನ ಭಜನಾ ಸೇವೆ ನಡೆದು 9 ನೇ ದಿನವಾದ ಇಂದು ಬೆಳಿಗ್ಗೆ ಶಾರದಾ ಮೂರ್ತಿಯ ಪ್ರತಿಷ್ಠಾಪನೆ ನಡೆಯಿತು. ವೇದಮೂರ್ತಿ ಶ್ರೀಧರ್ ಭಟ್ ಕಬಕ ಇವರು ಮೂರ್ತಿ ಪ್ರತಿಷ್ಠಾಪನೆಯನ್ನು ನೆರವೇರಿಸಿದರು.

ಬಳಿಕ ಧ್ವಜಾರೋಹಣವನ್ನು ಶಾರದ ಭಜನಾ ಮಂಡಳಿಯ ಗೌರವಾಧ್ಯಕ್ಷರಾದ ಕೋಲ್ಪೆ ಗುತ್ತು ರಾಜರಾಮ್ ಶೆಟ್ಟಿ ನೆರವೇರಿಸಿದರು. ಮಂಡಳಿಯ ಅಧ್ಯಕ್ಷರಾದ ಕೃಷ್ಣಪ್ಪ ಸಪಲ್ಯ ಕೆಮನಾಜೆ ಮತ್ತು ಸಮಿತಿಯ ಸದಸ್ಯರು ಕಾರ್ಯಕರ್ತರ ಸಮ್ಮುಖದಲ್ಲಿ ಕಾರ್ಯಕ್ರಮ ನೆರವೇರಿತು.

ಮಧ್ಯಾಹ್ನ 12 ಗಂಟೆಗೆ ದೇವಿಗೆ ಮಹಾಮಂಗಳಾರತಿ ಪೂಜೆ ನಡೆಯಿತು. ನಂತರ ಅಳಕೆ ಮಜಲಿನ ಪಕ್ಕದ ಕೆರೆಯಲ್ಲಿ ಮೂರ್ತಿ ವಿಸರ್ಜನೆ ಮಾಡಲಾಯಿತು. ಕೊರೂನ ಮಹಾ ಮಾರಿಯಿಂದ ಜಗತ್ತು ಆದಷ್ಟೂ ಬೇಗ ಬಿಡುಗಡೆಯಾಗಲಿ ಎಂದು ಪ್ರಾರ್ಥಿಸಲಾಯಿತು.

ಅನ್ನಸಂತರ್ಪಣೆಯೊಂದಿಗೆ ಕಾರ್ಯಕ್ರಮವನ್ನು ಸರಳವಾಗಿ ಮುಗಿಸಲಾಯಿತು. ಭಜನಾ ಮಂಡಳಿಯ ಮಾಜಿ ಗೌರವಾಧ್ಯಕ್ಷರಾದ ಜಿನ್ನಪ್ಪ ಗೌಡರನ್ನು ಮೌನ ಪ್ರಾರ್ಥನೆಯ ಮೂಲಕ ಸ್ಮರಿಸಲಾಯಿತು.

- Advertisement -

Related news

error: Content is protected !!