Sunday, June 14, 2026
spot_imgspot_img
spot_imgspot_img

ಕುಂದಾಪುರ: ಚಾಲಕನ ನಿಯಂತ್ರಣ ತಪ್ಪಿ ಪಿಕಪ್‌ ಪಲ್ಟಿ; ಅಪಾಯದಿಂದ ಪಾರು..!

- Advertisement -
- Advertisement -

ಕುಂದಾಪುರ: ಹಣ್ಣುಸಾಗಿಸುತ್ತಿದ್ದ ಪಿಕಪ್‌ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಮುಳ್ಳಿಕಟ್ಟೆಯ ಜಂಕ್ಷನ್‌ ಬಳಿ ನಡೆದಿದೆ.

ಘಟನೆಯ ಪರಿಣಾಮ ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.

ಹುಬ್ಬಳ್ಳಿ ಕಡೆಯಿಂದ ಉಡುಪಿ ಕಡೆಗೆ ಪಿಕಪ್‌ ಬರುತ್ತಿತ್ತು. ಪಿಕಪ್ ಅನ್ನು ವೇಗವಾಗಿ ಚಲಾಯಿಸುತ್ತಿದ್ದ ಚಾಲಕ ಮುಳ್ಳಿಕಟ್ಟೆಯ ಜಂಕ್ಷನ್‌ ಬಳಿ ಇಟ್ಟಿದ್ದ ಬ್ಯಾರಿಕೇಡ್‌ ಕಂಡು ಏಕಾಏಕಿ ಬ್ರೇಕ್‌ ಹಾಕಿದ್ದಾನೆ. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಪಿಕಪ್ ಪಲ್ಟಿಯಾಗಿದ್ದು, ಹೆದ್ದಾರಿಯ ಇನ್ನೊಂದು ಬದಿಗೆ ಬಿದ್ದಿದೆ.

- Advertisement -

Related news

error: Content is protected !!