- Advertisement -
- Advertisement -



ತಮಾಷೆಗಾಗಿ ಗೆಳತಿಯರ ಹೆದರಿಸಲು ಹೋಗಿ 3ನೇ ಮಹಡಿಯಿಂದ ಬಿದ್ದು ಮಹಿಳೆ ಮೃತಪಟ್ಟ ಘಟನೆ ಮುಂಬೈನ ಡೊಂಬಿವಿಲಿಯ ಗ್ಲೋಬ್ ಸ್ಟೇಟ್ ಕಟ್ಟಡದಲ್ಲಿ ನಡೆದಿದೆ.
ಮೃತ ಮಹಿಳೆಯನ್ನು ನಾಗಿನಾ ದೇವಿ ಮಂಜಿರಾಮ್ ಎಂದು ಗುರುತಿಸಲಾಗಿದೆ.
ಹೆದರಿಸಲು ಓಡಿ ಬಂದ ಮಹಿಳೆ ಆಯತಪ್ಪಿ ಕೆಳಗೆ ಬಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆ ಬಗ್ಗೆ ಮನಾಪಾಡ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿರುವುದಾಗಿ ವರದಿ ತಿಳಿಸಿದೆ.
ಕಟ್ಟಡದ ಮೂರನೇ ಮಹಡಿಯಲ್ಲಿ ನಾಗಿನಾ ದೇವಿ ತನ್ನ ಗೆಳತಿಯರಿಗೆ ತಮಾಷೆ ಮಾಡಲು ಮುಂದಾದ ವೇಳೆ ಈ ದುರ್ಘಟನೆ ನಡೆದಿದೆ.
ಆಕೆಯ ಮತ್ತೊಬ್ಬ ಗೆಳತಿ ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿರುವುದು ವೀಡಿಯೊದಲ್ಲಿದೆ.
- Advertisement -