Saturday, June 20, 2026
spot_imgspot_img
spot_imgspot_img

ಲೋಕಾಯುಕ್ತ ದಾಳಿ ವೇಳೆ ಚಿನ್ನಾಭರಣದ ಬ್ಯಾಗ್ ಪಕ್ಕದ ಮನೆಗೆಸೆದ ಅಧಿಕಾರಿ

- Advertisement -
- Advertisement -

ಕರ್ನಾಟಕದಾದ್ಯಂತ ಇಂದು (ಜುಲೈ 19) ಬೆಳ್ಳಂಬೆಳಗ್ಗೆ ಲೋಕಾಯುಕ್ತ 12 ಸರ್ಕಾರಿ ಅಧಿಕಾರಿಗಳ ಮೇಲೆ ದಾಳಿ ಮಾಡಿದ್ದು, ಒಟ್ಟು 55 ಕಡೆ ದಾಳಿ ನಡೆಸಿ ದಾಖಲೆ ಪರಿಶೀಲನೆ ನಡೆಸಿದೆ. ಈ ವೇಳೆ ಅಧಿಕಾರಿಗಳ ನಿವಾಸದಲ್ಲಿ ಕೇಜಿಗಟ್ಟಲ್ಲೇ ಚಿನ್ನದ ಜೊತೆಗೆ ಆಸ್ತಿಪಾಸ್ತಿ ದಾಖಲೆಗಳು ಪತ್ತೆಯಾಗಿವೆ. ಇನ್ನು ಲೋಕಾಯುಕ್ತ ದಾಳಿ ವೇಳೆ ಅಧಿಕಾರಿಯೋರ್ವ ಚಿನ್ನಾಭರಣ ಇದ್ದ ಬ್ಯಾಗ್​ ಪಕ್ಕದ ಮನೆಗೆ ಎಸೆದಿರುವ ಘಟನೆ ಬೆಳಕಿಗೆ ಬಂದಿದೆ.

ಭೂಮಾಪನ ಇಲಾಖೆ ಡೆಪ್ಯೂಟಿ ಕಂಟ್ರೋಲರ್ ಅಖ್ತರ್ ಅಲಿ ಮನೆಗೆ ದಾಳಿ ನಡೆಸಿದಾಗ ಈ ಘಟನೆ ನಡೆಯಿತು. ಪಕ್ಕದ ಮನೆಯ ಕಿಟಕಿಗೆ ಅಖ್ತರ್ ಆಲಿ ಮನೆ ಗೋಡೆ ಕನೆಕ್ಟ್‌ ಆಗಿದ್ದು, ಅಧಿಕಾರಿಗಳು ಮನೆಗೆ ಎಂಟ್ರಿ ನೀಡುತ್ತಿದ್ದಂತೆ ಪಕ್ಕದ ಮನೆಯ ಕಿಟಕಿಯೊಳಗೆ ಚಿನ್ನ ಇದ್ದ ಬ್ಯಾಗ್ ಎಸೆದಿದ್ದ ಅಖ್ತರ್ ಆಲಿ. ಪಕ್ಕದ ಮನೆಯ ಕಿಟಕಿಗೆ ಹತ್ತಿರದಲ್ಲೇ ಅಖ್ತರ್ ಆಲಿ ಮನೆಯ ಮೊದಲ ಅಂತಸ್ತು ಇದೆ. ಅಲ್ಲಿಂದ ಪಕ್ಕದ ಮನೆ ಕಿಟಕಿ ಒಳಗೆ ಬ್ಯಾಗ್‌ಗೆ ಚಿನ್ನ ತುಂಬಿ ಅಖ್ತರ್ ಆಲಿ ಎಸೆದಿದ್ದ.

ಬ್ಯಾಗ್ ಎಸೆದದ್ದನ್ನು ನೋಡಿ ನೆರೆ ಮನೆ ನಿವಾಸಿ ಖುದ್ದು ಅಧಿಕಾರಿಗಳನ್ನು ಕರೆದು ತೋರಿಸಿದ್ದಾರೆ. ಕೂಡಲೇ ಹೋಗಿ ಪರಿಶೀಲನೆ ಮಾಡಿದಾಗ ಬ್ಯಾಗ್‌ನಲ್ಲಿ ಚಿನ್ನ ಇರುವುದು ಪತ್ತೆಯಾಗಿದೆ. ಕೂಡಲೇ ಬ್ಯಾಗನ್ನು ಲೋಕಾ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ವಶಕ್ಕೆ ಪಡೆದ ಬ್ಯಾಗನ್ನು ಅಖ್ತರ್ ಆಲಿ ಮನೆಗೆ ತಂದು ಪರಿಶೀಲನೆ ಮಾಡಿದಾಗ, ಒಂದು ಬ್ಯಾಗ್ ತುಂಬಾ ಚಿನ್ನದ ಒಡವೆಗಳು ಇರುವುದು ಪತ್ತೆಯಾಗಿದೆ.

ದಾಳಿ ವೇಳೆ ಮನೆಯಲ್ಲೇ ಇದ್ದ ಅಖ್ತರ್ ಆಲಿಯ ಬಳಿಯಿಂದ ಸದ್ಯ ಕೆಲವು ಪ್ರಮುಖ ದಾಖಲೆಗಳನ್ನು ವಶಕ್ಕೆ ಪಡೆದು ತಂಡ ಪರಿಶೀಲನೆ ಮಾಡುತ್ತಿದೆ. ಕೆಲವು ದಾಖಲೆಗಳನ್ನೂ ಪಕ್ಕದ ಮನೆಯ ಕಿಟಕಿಯ ಮೂಲಕ ಅಲಿ ತಳ್ಳಿರುವ ಶಂಕೆ ಇದೆ. ಹೀಗಾಗಿ ಪಕ್ಕದ ಮನೆಯನ್ನೂ ಶೋಧ ನಡೆಸಲಾಗಿದೆ. ಇದುವರೆಗೆ ಅಖ್ತರ್ ಅಲಿ ಮನೆಯಲ್ಲಿ 25 ಲಕ್ಷ ರೂ. ನಗದು, 2.20 ಕೆಜಿ ಚಿನ್ನಾಭರಣ, 2 ಕೆಜಿ ಬೆಳ್ಳಿ ವಸ್ತುಗಳು, ಐವತ್ತಕ್ಕೂ ಹೆಚ್ಚು ದುಬಾರಿ ವಾಚ್‌ಗಳು, ಲಕ್ಷಾಂತರ ಮೌಲ್ಯದ ಡೈಮಂಡ್ ಆಭರಣಗಳು ಪತ್ತೆಯಾಗಿವೆ.

- Advertisement -

Related news

error: Content is protected !!