Sunday, June 29, 2025
spot_imgspot_img
spot_imgspot_img

ಉಳ್ಳಾಲ: ನಾಪತ್ತೆಯಾಗಿದ್ದ ಆಟೋ ರಿಕ್ಷಾ ಚಾಲಕ ಪತ್ತೆ

- Advertisement -
- Advertisement -

ಉಳ್ಳಾಲ: ರಿಕ್ಷಾ ಬಾಡಿಗೆ ತೆರಳಿದ್ದ ಬಳಿಕ ನಾಪತ್ತೆಯಾಗಿದ್ದ ಆಟೋ ಚಾಲಕರೊಬ್ಬರು ಇದೀಗ ತೊಕ್ಕೊಟ್ಟು ಸಮೀಪದ ಸಂಕೊಲಿಗೆ ಬಳಿ ಪತ್ತೆಯಾಗಿದ್ದಾರೆ.

ಉಳ್ಳಾಲ ದ ಮಡ್ಯಾರ್ ನಿವಾಸಿ ಮೆಲ್ವಿನ್ ಮೋಂತೆರೋ (56) ನಾಪತ್ತೆಯಾಗಿದ್ದ ರಿಕ್ಷಾ ಚಾಲಕ.

ಮೋಂತೆರೋ ಅವರು ಕೋಟೆಕಾರಿನ ಖಾಸಗಿ ಶಾಲೆಯೊಂದರ ಬಳಿ ಬೆಳಗ್ಗೆ ರಿಕ್ಷಾ ಬಾಡಿಗೆ ತೆರಳಿದ ಬಳಿಕ ನಾಪತ್ತೆಯಾಗಿದ್ದಾರು,ರಾತ್ರಿಯಾದರೂ ಮನೆಗೆ ವಾಪಸ್ ಬಾರದೆ ಇದ್ದಾಗ ಮನೆ ಮಂದಿ ಸಂಬಂಧಿಕರ ಬಳಿ ವಿಚಾರಿಸಿದಾಗಲೂ ಪತ್ತೆಯಾಗಿರಲಿಲ್ಲ.

ಈ ಹಿನ್ನಲೆಯಲ್ಲಿ ಮೆಲ್ವಿನ್ ಮೋಂತೆರೋರವರ ಪತ್ನಿ ಉಳ್ಳಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು, ಇದೀಗ ಅವರು ಸಂಕೊಲಿಗೆ ಬಳಿ ಪತ್ತೆಯಾಗಿದ್ದಾರೆ ಎಂಬ ಮಾಹಿತಿ ಲಭಿಸಿದೆ.

- Advertisement -

Related news

error: Content is protected !!