Sunday, June 29, 2025
spot_imgspot_img
spot_imgspot_img

ಬಂಟ್ವಾಳ : ಅನ್ಯಕೋಮಿನ ಯುವಕರಿಂದ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ : ಇಬ್ಬರು ಅರೆಸ್ಟ್, ಓರ್ವ ಪರಾರಿ

- Advertisement -
- Advertisement -

ಬಂಟ್ವಾಳ: ಅಪ್ರಾಪ್ತ ಬಾಲಕಿಯೋರ್ವಳನ್ನು ಪುಸಲಾಯಿಸಿ ಅನ್ಯ ಕೋಮಿನ ಯುವಕರು ಪಾರ್ಕ್ ಒಂದಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಲೈಂಗಿಕ ಕಿರುಕುಳ ನೀಡಿದ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೋಲೀಸರು ಬಂಧಿಸಿದ ಘಟನೆ ನಡೆದಿದೆ.

ಆರೋಪಿಗಳ ವಿರುದ್ದ ಪೋಕ್ಸೋ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಅವರಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಘಟನೆಗೆ ಸಂಬಂಧಿಸಿದಂತೆ ಇನ್ನೋರ್ವ ಪ್ರಮುಖ ಆರೋಪಿ ಪೋಲೀಸರ ಕೈಗೆ ಸಿಗದೆ ಪರಾರಿಯಾಗಿದ್ದಾನೆ.

ಫೈಜಲ್ ಹಾಗೂ ಲಿಕೇಶ್ ಎಂಬಾತನನ್ನು ಪೋಲೀಸರು ಬಂಧಿಸಿದ್ದು, ಅಫೀಕ್ ಎಂಬಾತ ತಲೆಮರೆಸಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.

ಅಪ್ರಾಪ್ತ ಬಾಲಕಿಯನ್ನು ಬಂಟ್ವಾಳದ ಪಾರ್ಕ್ ಒಂದಕ್ಕೆ ಬರುವಂತೆ ಪುಸಲಾಯಿಸಿ, ಬರಮಾಡಿಕೊಂಡ ಮೂವರು ಯುವಕರು ಬಳಿಕ ಬಾಲಕಿಗೆ ಕಿರುಕುಳ ನೀಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಅಪ್ರಾಪ್ತ ಬಾಲಕಿಗೆ ಬೇರೆ ಬೇರೆ ವಿಧದ ಆಸೆಯನ್ನು ತೋರಿಸಿ,ಪುಸಲಾಯಿಸಿ ಯುವಕರ ತಂಡ ಬರಮಾಡಿಕೊಂಡಿದೆ. ಪಾರ್ಕ್ ಗೆ ಬಂದ ಬಾಲಕಿಗೆ ಇವರ ಅಸಲಿ ಕಥೆ ಅರ್ಥವಾಗಿ ಕೂಡಲೇ ಹಿಂದೂ ಸಂಘಟನೆಯ ‌ಕಾರ್ಯಕರ್ತರಿಗೆ ಸಂಪರ್ಕ ಮಾಡಿ ರಕ್ಷಣೆ ಮಾಡುವಂತೆ ಭಿನ್ನವಿಸಿದ್ದಾಳೆ. ಪರಿಸ್ಥಿತಿಯನ್ನು ಅರ್ಥಮಾಡಿಕೊಂಡ ಸಂಘಟನೆಯ ಸದಸ್ಯರು ಕ್ಷಣಾರ್ಧದಲ್ಲಿ ಘಟನಾ ಸ್ಥಳಕ್ಕೆ ಧಾವಿಸಿ ಸಂತ್ರಸ್ತ ಬಾಲಕಿಯನ್ನು ರಕ್ಷಣೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

- Advertisement -

Related news

error: Content is protected !!