Tuesday, June 16, 2026
spot_imgspot_img
spot_imgspot_img

ಕಾಸರಗೋಡು : ರೈಲಿನಿಂದ ಬಿದ್ದು ಯುವಕ ಮೃತ್ಯು

- Advertisement -
- Advertisement -

ಕಾಸರಗೋಡು : ರೈಲಿನಿಂದ ಬಿದ್ದು ಪಾಲಕ್ಕಾಡ್ ಮೂಲದ ಯುವಕನೋರ್ವ ಸಾವನ್ನಪ್ಪಿದ ಘಟನೆ ನಡೆದಿದೆ.

ಪಾಲಕ್ಕಾಡ್ ಮೂಲದ ಸಬೀರ್ (32) ಮೃತ ವ್ಯಕ್ತಿ. ಸೋಮವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ಪೆರಿಂಗಡಿಯಲ್ಲಿ ಮೃತದೇಹ ಪತ್ತೆಯಾಗಿದೆ.
ಸಬೀರ್ ತನ್ನ ಸ್ನೇಹಿತನೊಂದಿಗೆ ಗೋವಾಕ್ಕೆ ಹೋಗುತ್ತಿದ್ದಾಗ ಘಟನೆ ನಡೆದಿದೆ.

ಗೋವಾ ತಲುಪಿದಾಗ ಸಬೀ‌ರ್‍ ಕಾಣದಿದ್ದಾಗ ಆತನ ಸ್ನೇಹಿತ ಗೋವಾ ಪೊಲೀಸರಿಗೆ ದೂರು ನೀಡಿದ್ದಾರೆ. ನಂತರ ಕುಂಬಳೆ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಶವ ಪತ್ತೆಯಾಗಿದೆ ಎಂದು ತಿಳಿದ ಗೋವಾ ಪೊಲೀಸರು ಇತರ ಪೊಲೀಸ್ ಠಾಣೆಗಳನ್ನು ಸಂಪರ್ಕಿಸಿದರು.

- Advertisement -

Related news

error: Content is protected !!