Saturday, June 28, 2025
spot_imgspot_img
spot_imgspot_img

ತಾಜ್​ಮಹಲ್​ನಲ್ಲಿ ಕೇಸರಿ ಧ್ವಜ – ಶಿವ ಸ್ತೋತ್ರ ಪಠಣೆ

- Advertisement -
- Advertisement -

ಆಗ್ರಾ: ದಸರಾ ಹಬ್ಬದ ದಿನದಂದೇ ಆಗ್ರಾದ ತಾಜ್​ಮಹಲ್​ನಲ್ಲಿ ಕೇಸರಿ ಧ್ವಜ ಹಾರಿಸುವುದರ ಜೊತೆಗೆ ಶಿವ ಸ್ತೋತ್ರವನ್ನ ಪಠಿಸಲಾಗಿದೆ. ಈ ಘಟನೆ ಇದೀಗ ಸಾಕಷ್ಟು ಸುದ್ದಿ ಮಾಡಿದ್ದು ಕೋಲಾಹಲ ಮೂಡಿಸಿದೆ. ಹಿಂದೂ ಜಾಗರಣ ವೇದಿಕೆಯ ಪದಾಧಿಕಾರಿ ಹಾಗೂ ಕಾರ್ಯಕರ್ತರು ತಾಜ್​ಮಹಲ್​ ಪ್ರೇಮ ಸ್ಮಾರಕದಲ್ಲಿ ಕೇಸರಿ ಧ್ವಜವನ್ನ ಹಾರಿಸಿದ್ದಾರೆ. ಅಲ್ಲದೆ ಇದೆ ಸಂದರ್ಭದಲ್ಲಿ ಹಿಂದೂ ಜಾಗರಣ ವೇದಿಕೆ ಪದಾಧಿಕಾರಿ ಗೌರವ್​ ಠಾಕೂರ್​ ತಾಜ್ ಸಂಕೀರ್ಣದ ಒಳಗೆ ಶಿವ ಸ್ತೋತ್ರ ಪಠಿಸಿದ್ದಾರೆ.

ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಗೌರವ್​ ಠಾಕೂರ್, ನಮ್ಮ ಸಂಘಟನೆ ತಾಜ್​ಮಹಲ್​ನ್ನು ಶಿವನ ದೇವಾಲಯ ಎಂದು ನಂಬಿದೆ. ಶಿವನ ಮಂದಿರವನ್ನ ನೆಲಸಮ ಮಾಡಿದ ಮೊಘಲ್​ ಚಕ್ರವರ್ತಿ ಶಹಜಹಾನ್​ ಇದನ್ನ ಸ್ಮಾರಕ ಮಾಡಿದ್ದಾನೆ. ಹೀಗಾಗಿ ನಾವಿಲ್ಲಿ ಶಿವ ಸ್ತೋತ್ರ ಪಠಿಸಿದ್ದೇವೆ ಎಂದಿದ್ದಾರೆ. ಕೇಸರಿ ಧ್ವಜ ಹಾರಿಸಿದ ಯುವಕರನ್ನ ಸಿಐಎಸ್​ಎಫ್​​ ಪಡೆ ವಶಕ್ಕೆ ಪಡೆದಿದೆ ಎಂದು ವರದಿಯಾಗಿದೆ.

- Advertisement -

Related news

error: Content is protected !!