Monday, August 10, 2026
spot_imgspot_img
spot_imgspot_img

ಕುಂದಾಪುರ: ಟ್ರಕ್-ದ್ವಿ ಚಕ್ರ ವಾಹನ ನಡುವೆ ಅಪಘಾತ ; ಸವಾರ ಸ್ಥಳದಲ್ಲೇ ಸಾವು

- Advertisement -
- Advertisement -

ಕುಂದಾಪುರ : ಟ್ರಕ್ ಡಿಕ್ಕಿ ಹೊಡೆದು ದ್ವಿ ಚಕ್ರ ಸವಾರನೊಬ್ಬ ಮೃತಪಟ್ಟ ಘಟನೆ ಗೋಳಿಯಂಗಡಿಯ ಹಾಲಾಡಿ ಸಮೀಪ ನಡೆದಿದೆ.

ನಾಗರಾಜ್ (41) ಮೃತ ದುರ್ದೈವಿ.

ನಾಗರಾಜ್ ಅವರು ತಮ್ಮ ಸ್ಕೂಟರ್‌ನಲ್ಲಿ ಕುಂದಾಪುರ ಕಡೆಗೆ ಹೋಗುತ್ತಿದ್ದಾಗ ಗೋಳಿಯಂಗಡಿಯಿಂದ ಹಾಲಾಡಿ ಕಡೆಗೆ ಹೋಗುತ್ತಿದ್ದ ಟ್ರಕ್ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ನಾಗರಾಜ್ ಅವರು ರಸ್ತೆಗೆ ಎಸೆಯಲ್ಪಟ್ಟಿದ್ದು, ಟ್ರಕ್ ನ ಹಿಂಬದಿ ಎಡಚಕ್ರ ಅವರ ತಲೆಯ ಮೇಲೆ ಹರಿದಿದೆ. ಪರಿಣಾಮ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಘಟನೆ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!