- Advertisement -
- Advertisement -




ಇಡ್ಕಿದು; ಅಂಗನವಾಡಿ ಹಳೆ ವಿದ್ಯಾರ್ಥಿಗಳ ಮುಂದಾಳತ್ವದಲ್ಲಿ ಹಳೆ ವಿದ್ಯಾರ್ಥಿಗಳು, ಮಕ್ಕಳ ಪೋಷಕರು, ಹಾಗೂ ಊರ ದಾನಿಗಳ ಸಹಕಾರದೊಂದಿಗೆ ಇಡ್ಕಿದು ಗ್ರಾಮದ ಆರ್ಕೆಚ್ಚಾರು ಅಂಗನವಾಡಿ ಕೇಂದ್ರಕ್ಕೆ ಇಂಟರ್ ಲಾಕ್ ಅಳವಡಿಸಲಾಯಿತು.

ಮಳೆಗಾಲದಲ್ಲಿ ಅಂಗನವಾಡಿ ಕೇಂದ್ರದ ಸುತ್ತಲೂ ಮಳೆ ನೀರು ನಿಂತು ಹಾನಿಯಾಗುತ್ತಿದ್ದು. ಈ ಬಗ್ಗೆ ಮಕ್ಕಳ ಸುರಕ್ಷತಾ ದೃಷ್ಟಿಯಿಂದ ಅಂಗನವಾಡಿ ಶಿಕ್ಷಕಿ ಪ್ರವೀಣಾ ವೇಣಿ ಇವರು ಅಂಗನವಾಡಿಯ ಹಳೆ ವಿದ್ಯಾರ್ಥಿಗಳಲ್ಲಿ ಅಂಗನವಾಡಿಯ ಅಂಗಳಕ್ಕೆ ಮ್ಯಾಟ್ ಅಳವಡಿಸಿಕೊಡುವಂತೆ ಮನವಿ ಮಾಡಿದ್ದರು.ಈ ಬಗ್ಗೆ ಅಂಗನಾಡಿಯ ಹಳೆವಿದ್ಯಾರ್ಥಿಗಳು ಹೆಚ್ಚಿನ ಮುಂದಾಳತ್ವ ವಹಿಸಿ ಮಕ್ಕಳ ಪೋಷಕರು, ಹಾಗೂ ಊರ ದಾನಿಗಳ ಸಹಕಾರದೊಂದಿಗೆ ಅಂಗನವಾಡಿ ಕೇಂದ್ರಕ್ಕೆ ಇಂಟರ್ ಲಾಕ್ ಅಳವಡಿಸಿ ಹಾಗೂ ಎರಡು ದಿನಗಳ ಶ್ರಮದಾನ ಮಾಡಿ ಶಾಲಾಭಿಮಾನಕ್ಕೆ ಸಾಕ್ಷಿಯಾಗಿದ್ದಾರೆ. ಈ ಸಂದರ್ಭದಲ್ಲಿ ಅಂಗನವಾಡಿ ಶಿಕ್ಷಕಿ ಪ್ರವೀಣಾ ವೇಣಿ ಹಾಗೂ ಸಹಾಯಕಿ ಜಯಂತಿ ಕೃತಜ್ಞತೆ ಸಲ್ಲಿಸಿದ್ದಾರೆ.


- Advertisement -