




ವಿಟ್ಲ: 78ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ವಿಟ್ಲ ಲಯನ್ಸ್ ಭವನದಲ್ಲಿ ನಿವೃತ್ತ ಸೈನಿಕರಾದ ಲಯನ್ ಬಾಲಕೃಷ್ಣ ಅವರು ಧ್ವಜಾರೋಹಣ ಮಾಡಿದರು.
ಬಳಿಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಚಂದಳಿಕೆಯಲ್ಲಿ ವಿಟ್ಲ ಲಯನ್ಸ್ ಸಂಸ್ಥೆಯ ಅಧ್ಯಕ್ಷ ರಜಿತ್ ಆಳ್ವ ಇವರು ಧ್ವಜಾರೋಹಣ ನೆರವೇರಿಸಿ ಮಕ್ಕಳಿಗೆ ಮತ್ತು ಊರಿನವರಿಗೆ ಈ ದೇಶವನ್ನು ಯಾವ ರೀತಿ ಮುಂದೆ ಕೊಂಡೊಯ್ಯಬೇಕು ಹಾಗೂ ಯಾವ ರೀತಿ ದೇಶಾಭಿಮಾನವನ್ನು ಬೆಳೆಸಿಕೊಳ್ಳಬೇಕು, ಸ್ವಾತಂತ್ರ್ಯ ವನ್ನು ಹೇಗೆ ಉಳಿಸಿಕೊಳ್ಳಬೇಕು ಎಂಬುವದರ ಬಗ್ಗೆ ಮಾತನಾಡಿದರು.
ನಂತರ ಮಕ್ಕಳಿಗೆ ಸಿಹಿ ತಿಂಡಿ ವಿತರಿಸಲಾಯಿತು. ಈ ಸಂದರ್ಭದಲ್ಲಿ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಕೊಡುಗೈ ದಾನಿಯದ ಲಯನ್ ಸುಮತಿ ದೇಜಪ್ಪ ನಿಡ್ಯ, ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಭವಾನಿ ಟೀಚರ್ ಕೊಲ್ಯ, ಸಂಜೀವ ಪೂಜಾರಿ ಭಾರತ್, ಮುಖ್ಯ ಉಪಾಧ್ಯಾಯ ವಿಶ್ವನಾಥ ಗೌಡ ಮತ್ತು ಶಿಕ್ಷಕ ವೃಂದ ಹಾಗೂ ಶಾಲಾಭಿವೃದ್ಧಿ ಸಮಿತಿ ಸದಸ್ಯರು , ಪಂಚಾಯತಿ ಸದಸ್ಯರಾದ ರಕ್ಷಿತಾ ಸನತ್, ವಿಟ್ಲ ಲಯನ್ಸ್ ಸಂಸ್ಥೆಯ ಆಡಳಿತ ಅಧಿಕಾರಿ ಡಾ.ಗೀತಾಪ್ರಕಾಶ್, ಮಂಗೇಶ್ ಭಟ್, ಬಾಲಕೃಷ್ಣ ಗೌಡ, ಗಂಗಾಧರ್, ಡೇನಿಸ್ ಲೋಬೊ, ಡೇವಿಡ್ ವೇಗಸ್,ಅಂಥೋನಿ ಲೋಬೊ, ಇಕ್ಬಾಲ್ ಹೊನೆಸ್ಟ್, ಸಪ್ವಾನ್, ಕಲಂದರ್, ಪುಷ್ಪಲತಾ, ವಿಮಲಾ ಶೆಟ್ಟಿ, ಹಾಗೂ ವಲಯ ಅಧ್ಯಕ್ಷ ಸುದೇಶ್ ಭಂಡಾರಿ, ಕಾರ್ಯದರ್ಶಿ ಅರವಿಂದ್ ರೈ, ಕೋಶಾಧಿಕಾರಿ ಮನೋಜ್ ರೈ ಉಪಸ್ಥಿತರಿದ್ದರು.