Tuesday, July 1, 2025
spot_imgspot_img
spot_imgspot_img

ಪುತ್ತೂರು: ಸ್ಕೂಟರ್‌ ಸವಾರನ ಮೇಲೆ ಕಾಡು ಹಂದಿ ದಾಳಿ; ಯುವಕನಿಗೆ ಗಂಭೀರ ಗಾಯ ..!

- Advertisement -
- Advertisement -

ಪುತ್ತೂರು: ಸ್ಕೂಟರ್‌ ಸವಾರನೋರ್ವನ ಮೇಲೆ ಕಾಡು ಹಂದಿಯೊಂದು ದಾಳಿ ನಡೆಸಿದ ಪರಿಣಾಮ ಸವಾರ ಗಂಭೀರ ಗಾಯಗೊಂಡ ಘಟನೆ ಪುತ್ತೂರು ತಾಲೂಕು ಅರಿಯಡ್ಕ ಗ್ರಾಮದ ಕೌಡಿಚ್ಚಾರು ಸಮೀಪದ ಕುರುಂಜ ಮಣ್ಣಾಪು ಎಂಬಲ್ಲಿ ನಡೆದಿದೆ.

ಗಂಭೀರ ಗಾಯಗೊಂಡ ಯುವಕ ಸ್ಥಳೀಯ ನಿವಾಸಿ ಧನುಷ್(30) ಎಂದು ಗುರುತಿಸಲಾಗಿದೆ.

ಕುಂಬ್ರ ಪೆಟ್ರೋಲ್ ಬಂಕ್‌ನಲ್ಲಿ ಮ್ಯಾನೇಜರ್ ಆಗಿರುವ ಧನುಷ್ ಎಂದಿನಂತೆ ಇಂದು ಬೆಳಗ್ಗೆ ಸ್ಕೂಟರ್‌ನಲ್ಲಿ ಪೆಟ್ರೋಲ್ ಬಂಕ್‌ಗೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಕುರುಂಜ ಮಣ್ಣಾಪು ತಲುಪಿದಾಗ ಏಕಾಏಕಿ ಕಾಡು ಹಂದಿಯೊಂದು ಧನುಷ್ ಚಲಾಯಿಸುತ್ತಿದ್ದ ಸ್ಕೂಟರ್ ಮೇಲೆ ಎರಗಿದೆ. ಈ ವೇಳೆ ನಿಯಂತ್ರಣ ತಪ್ಪಿ ಕೆಳಗೆ ಬಿದ್ದ ಧನುಷ್ ಮೇಲೆ ಎರಗಿದ ಕಾಡುಹಂದಿ, ಅವರ ಬಲ ಕೈಗೆ ಕಚ್ಚಿ ಗಂಭೀರವಾಗಿ ಗಾಯಗೊಳಿಸಿದೆ. ಅಲ್ಲದೆ, ಇತರ ದೇಹದ ಭಾಗಗಳಿಗೆ ಗಾಯಗೊಳಿಸಿದೆ. ಗಾಯಾಳುವನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

- Advertisement -

Related news

error: Content is protected !!