Thursday, August 13, 2026
spot_imgspot_img
spot_imgspot_img

ಬಂಟ್ವಾಳ : ಬೈಕ್ ಕಳವು : ಬಂಟ್ವಾಳ ನಗರ ಠಾಣೆಯಲ್ಲಿ ದೂರು ದಾಖಲು

- Advertisement -
- Advertisement -

ಬಂಟ್ವಾಳ : ಬಿ ಸಿ ರೋಡಿನ ಹಳೆ ತಾಲೂಕು ಕಚೇರಿ ಬಳಿ ನಿಲ್ಲಿಸಿದ್ದ ಬೈಕ್ ಕಳವುಗೈದಿರುವ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಮಣಿನಾಲ್ಕೂರು ಗ್ರಾಮದ ಅಜಿಲಮೊಗರು ನಿವಾಸಿ ಮೋಹನ್ ಅವರಿಗೆ ಸೇರಿದ ಬೈಕ್ ಕಳವಾಗಿದೆ. ಇವರು ಸೋಮವಾರ (ಆಗಸ್ಟ್ 19) ಸಂಜೆಯ ವೇಳೆ, ಬಂಟ್ವಾಳ ಹಳೆ ತಾಲೂಕು ಕಛೇರಿ ಬಳಿ ತನ್ನ KA19ET7355 ನೋಂದಣಿ ಸಂಖ್ಯೆಯ ಪಲ್ಸರ್ ದ್ವಿಚಕ್ರ ವಾಹನವನ್ನು ನಿಲ್ಲಿಸಿ ಹೋಗಿದ್ದರು. ಅದೇ ದಿನ ರಾತ್ರಿ ಸ್ಥಳಕ್ಕೆ ಬಂದು ನೋಡಿದಾಗ ತನ್ನ ದ್ವಿಚಕ್ರ ವಾಹನ ಕಾಣದಿದ್ದು, ಸುತ್ತಮುತ್ತಲಿನ ಪರಿಸರದಲ್ಲಿ ಹುಡುಕಿದರೂ ಪತ್ತೆಯಾಗಲಿಲ್ಲ. ಕಳವಾದ ದ್ವಿಚಕ್ರ ವಾಹನದ ಮೌಲ್ಯ 40 ಸಾವಿರ ರೂಪಾಯಿ ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಅ.ಕ್ರ 142/2024 ಕಲಂ: 303(2) BNS -2023 ರಂತೆ ಪ್ರಕರಣ ದಾಖಲಾಗಿರುತ್ತದೆ.

- Advertisement -

Related news

error: Content is protected !!