Sunday, June 29, 2025
spot_imgspot_img
spot_imgspot_img

ನಾಳೆ ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿನ ಕೆಲವು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ

- Advertisement -
- Advertisement -

ನಾಳೆ ದಿನಾಂಕ 28.08.2024ರಂದು ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿನ ವಿದ್ಯುತ್ ಮಾರ್ಗದಲ್ಲಿ ತುರ್ತು ಪಾಲನಾ ಕಾರ್ಯ ಇರುವುದರಿಂದ ಕೆಲವು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಇರಲಿದೆ ಎಂದು ವಿಟ್ಲ ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಟ್ಲ ವ್ಯಾಪ್ತಿಯ ಮತ್ತು ಸುತ್ತಮುತ್ತಲಿನ ಪ್ರದೇಶಕ್ಕೆ ವಿದ್ಯುತ್ ಸರಬರಾಜು ಆಗುವ 11ಕೆವಿ ವಿಟ್ಲ ಟೌನ್, ಮಂಗಿಲಪದವು, ಸೂರ್ಯ, ಪುಣಚ, ಅಡ್ಯನಡ್ಕ, ಕಡಂಬು, ಕನ್ಯಾನ ಮತ್ತು ಪೆರುವಾಯಿ ಫೀಡರ್ ನಲ್ಲಿ ಬೆಳಿಗ್ಗೆ 10:00 ರಿಂದ ಸಾಯಂಕಾಲ 5:00 ರ ವರೆಗೆ ವಿದ್ಯುತ್ ನಿಲುಗಡೆಗೊಳಿಸಲಾಗುವುದು. ಆದುದರಿಂದ ವಿದ್ಯುತ್ ಗ್ರಾಹಕರು ಕಂಪನಿಯೊಂದಿಗೆ ಸಹಕರಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!