- Advertisement -
- Advertisement -


ವಿಶಾಖಪಟ್ಟಣಂ: ಆಂಧ್ರಪ್ರದೇಶದಲ್ಲಿ ಮನೆಗಳಿಗೆ ಆಕಾಶದಿಂದ ನೇರ ವಿದ್ಯುತ್ಸಂಪರ್ಕ ಕಲ್ಪಿಸುವ ದಿನಗಳು ದೂರವಿಲ್ಲ ಎಂದು ಸಿಎಂ ಚಂದ್ರಬಾಬು ನಾಯ್ಡು ಭರವಸೆ ನೀಡಿದ್ದಾರೆ.
ವಿಶಾಖಪಟ್ಟಣಂನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಬಾಹ್ಯಾಕಾಶದಿಂದ ನೇರವಾಗಿ ಮನೆಗೆ ವಿದ್ಯುತ್ ಸೌಲಭ್ಯ ಕಲ್ಪಿಸಲು ಸ್ಕೈರೂಟ್ ಏರೋಸ್ಪೇಸ್ ಜತೆ ಒಪ್ಪಂದ ಮಾಡಿಕೊಂಡಿದ್ದೇವೆ. ಇದಕ್ಕೆ ಸಂಬಂಧಿತ ಕೆಲಸ ಮಾಡಲು ಕಂಪನಿಗೆ ಸೂಚಿಸಿದ್ದೇವೆ. ಲೇಸರ್‌ತಂತ್ರಜ್ಞಾನದ ಮೂಲಕ ರಾತ್ರಿ ವೇಳೆಯಲ್ಲಿಯೂ ನಿರ್ದಿಷ್ಟ ಪ್ರದೇಶಗಳಿಗೆ ಸೂರ್ಯನ ಬೆಳಕು ಮತ್ತು ವಿದ್ಯುತ್ ಒದಗಿಸುವ ಸಾಧ್ಯತೆಗಳ ಕುರಿತು ಚರ್ಚಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಅಮೆರಿಕ ಮೂಲದ ಕಂಪನಿಯೊಂದು ಭೂಮಿಗೆ ರಾತ್ರಿ ಹೊತ್ತಲ್ಲೂ ಬೆಳಕು ನೀಡಲು ಸ್ಕೈರೂಟ್ ಮೂಲಕ ಉಪಗ್ರಹ ಹಾರಿಸುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
- Advertisement -








