- Advertisement -
- Advertisement -




ವಿಟ್ಲ: ಕಳೆದ ಇಪ್ಪತ್ತು ವರ್ಷಗಳಿಂದ ವಿಟ್ಲದ ಎಂಪೈರ್ ಮಾಲ್‌ನಲ್ಲಿ ಕಾರ್ಯಾಚರಿಸುತ್ತಿರುವ ರಾಜಧಾನಿ ಜ್ಯುವೆಲ್ಲರ್‍ಸ್ ನವೀಕರಣದ ಜೊತೆಗೆ ಆರ್.ಜೆ. ಗೋಲ್ಡ್ & ಡೈಮಂಡ್ಸ್ ಎಂಬ ಹೊಸ ನಾಮಕರಣದೊಂದಿಗೆ ಹಾಗೂ ಇದೇ ಮಳಿಗೆಯಲ್ಲಿ ಕಳೆದ ಹದಿಮೂರು ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಫ್ಯಾಶನ್ ವರ್ಲ್ಡ್ ರೆಡಿಮೆಡ್ಸ್ & ಟೆಕ್ಸ್‌ಟೈಲ್ಸ್ ಇದೀಗ ವಿನೂತನ ಕಲೆಕ್ಷನ್ ಹಾಗೂ ನವೀಕೃತ, ಸಂಪೂರ್ಣ ಹವಾನಿಯಂತ್ರಿತ ಶೋರೂಂ ಸೆಪ್ಟೆಂಬರ್ 5 ರಂದು ಬೆಳಿಗ್ಗೆ 10 ಗಂಟೆಗೆ ಉದ್ಘಾಟನೆಗೊಳ್ಳಲಿದೆ.
ಈ ಉದ್ಘಾಟನಾ ಸಮಾರಂಭದಲ್ಲಿ ಸಯ್ಯದ್ ಕೆ.ಎಸ್.ಅಟ್ಟಕೊಯ ತಂಙಳ್, ಶ್ರೀ ಗುರುದೇವಾನಂದ ಸ್ವಾಮೀಜಿ ಒಡಿಯೂರು, ವಿ.ಫಾದರ್.ಐವನ್ ಮಿಚೈಲ್ ರೊಡ್ರಿಗಸ್ ಪ್ಯಾರಿಷ್ ಪಾದ್ರಿ, ಲೇಡಿ ಆಫ್ ಡೊಲರ್‍ಸ್ ಚರ್ಚ್ ವಿಟ್ಲ ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ
- Advertisement -