Saturday, June 6, 2026
spot_imgspot_img
spot_imgspot_img

ಬೆಳ್ತಂಗಡಿ: ನಿರ್ಲಕ್ಷ್ಯದಿಂದ ಗುಂಡು ಹಾರಿಸಿದ ಆರೋಪ; ಗಾಯಗೊಂಡ ತಮ್ಮನಿಂದ ಅಣ್ಣನ ವಿರುದ್ಧ ದೂರು..!

- Advertisement -
- Advertisement -

ಬೆಳ್ತಂಗಡಿ: ಪರವಾನಿಗೆ ಹೊಂದಿರುವ ಕೋವಿಯಿಂದ ಕಾಡುಪ್ರಾಣಿಯನ್ನು ಹೆದರಿಸಲು ಅಜಾಗರೂಕತೆಯಿಂದ ಕೋವಿಯನ್ನು ಸಿಡಿಸಿದ್ದು, ಆ ಗುಂಡು ವ್ಯಕ್ತಿಯೋರ್ವರಿಗೆ ತಗುಲಿ ಗಾಯಗೊಂಡ ಘಟನೆ ಬೆಳ್ತಂಗಡಿಯ ನಿಡ್ಲೆಯಲ್ಲಿ ನಡೆದಿದೆ.

ಗಾಯಗೊಂಡ ಲಕ್ಷ್ಮಣರವರು ತನ್ನ ಸಹೋದರ ಡೀಕಯ್ಯ ವಿರುದ್ಧ ಬೆಳ್ತಂಗಡಿ ಠಾಣೆಗೆ ದೂರು ನೀಡಿದ್ದಾರೆ.

ಮಾ.02ರಂದು ನಾಯಿಗಳು ಬೊಗಳುತ್ತಿರುವುದನ್ನು ಗಮನಿಸಿದ ಲಕ್ಷ್ಮಣ ಗೌಡರವರು ತನ್ನ ಜಮೀನಿಗೆ ಬರುತ್ತಿರುವ ಕಾಡು ಪ್ರಾಣಿಗಳನ್ನು ಹೆದರಿಸಲು ಪರಾವನಿಗೆ ಹೊಂದಿರುವ ಎಸ್‌ಬಿಬಿಎಲ್‌ ತೋಟೆ ಕೋವಿಯನ್ನು ತೆಗೆದುಕೊಂಡು ಬಂದು ಅದಕ್ಕೆ ಮದ್ದುಗುಂಡನ್ನು ತುಂಬಿಸಿ ಅಂಗಳದಲ್ಲಿ ನಿಂತಿದ್ದ ಲಕ್ಷ್ಮಣರವರನ್ನು ಗಮನಿಸದೇ ನಿರ್ಲಕ್ಷ್ಯದಿಂದ ಮನೆಯ ಮುಂದುಗಡೆ ಇರುವ ತೋಟದ ಕಡೆ ಗುರಿ ಇಟ್ಟು ಕೋವಿಯನ್ನು ಸಿಡಿಸಿದ್ದಾರೆ.

ಈ ವೇಳೆ ಚಿಕ್ಕ 2 ಗುಂಡುಗಳು ಲಕ್ಷ್ಮಣರವರಿಗೆ ತಾಗಿ ರಕ್ತ ಬರುತ್ತಿದ್ದು ಗಾಯಗೊಂಡ ಅವರನ್ನು ಉಜಿರೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಲಕ್ಷ್ಮಣರವರು ನೀಡಿದ ದೂರಿನಂತೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!