Monday, July 27, 2026
spot_imgspot_img
spot_imgspot_img

ಆತ್ಮ ನಿರ್ಭರ ಭಾರತಕ್ಕಾಗಿ ಉದ್ಯೋಗ ನೈಪುಣ್ಯ ತರಬೇತಿ ಶಿಬಿರ

- Advertisement -
- Advertisement -

ವಿಟ್ಲ(ನ.1): ಪುಣಚ ಗ್ರಾಮ ವಿಕಾಸ ಸಮಿತಿ ಮಂಗಳೂರು ವಿಭಾಗ ಹಾಗೂ ವಿವೇಕಾನಂದ ವಿದ್ಯಾವರ್ಧಕ ಸಂಘ (ರಿ) ಪುತ್ತೂರು ಮತ್ತು ಸಹಕಾರ ಭಾರತಿ ದಕ್ಷಿಣ ಕನ್ನಡ ಜಿಲ್ಲೆ ಇವುಗಳ ಸಹಯೋಗದೊಂದಿಗೆಉದ್ಯೋಗ ನೈಪುಣ್ಯ ತರಬೇತಿ ಶಿಬಿರದಿನಾಂಕ 9/11/20 ಸೋಮವಾರದಿಂದ 14/11/20 ಶನಿವಾರದವರೆಗೆಪರಿಯಾಲ್ತಡ್ಕ ಖಾಸಗಿ ಹಿರಿಯ ಪ್ರಾಥಮಿಕ ಶಾಲೆ, ಪುಣಚ ಇಲ್ಲಿ ನಡೆಯಲಿದೆ. ತರಬೇತಿ ಅವಧಿಯು ಪೂರ್ವಾಹ್ನ 10:00 ರಿಂದ ಸಂಜೆ 04-00 ರವರೆಗೆ ನಡೆಯಲಿದೆ.


ಇಂದಿನ ಬದಲಾದ ಪರಿಸ್ಥಿತಿಯಲ್ಲಿ ಸ್ವಾವಲಂಬಿ, ಸ್ವಸಾಮರ್ಥ್ಯದಿಂದ ಬದುಕನ್ನು ಕಟ್ಟಿಕೊಂಡು ಸಾವಿರಾರು ಜನರಿಗೆ ಉದ್ಯೋಗವನ್ನು ನೀಡುವುದರ ಜೊತೆಗೆ ಗುಣಮಟ್ಟದ ಆಕರ್ಷಕ ಆರೋಗ್ಯದಾಯಕ ಹೆಚ್ಚು ಕೈಗಳಿಗೆ ಕೆಲಸವನ್ನು ನೀಡುವ ಮೂಲಕ ಹೆಚ್ಚು ಕುಟುಂಬಗಳನ್ನು ಸಂತೃಪ್ತಗೊಳಿಸುವ ದಿಕ್ಕಿನಲ್ಲಿ ಹೆಜ್ಜೆ ಇಡಬೇಕಿದೆ.

ತರಬೇತಿ ಪಡೆಯುವವರ ಆಸಕ್ತಿ, ಕೌಶಲ್ಯ, ನೈಪುಣ್ಯಗಳನ್ನು ಗಮನದಲ್ಲಿಟ್ಟುಕೊಂಡು ಈ ಮಹತ್ಕಾರ್ಯಕ್ಕೆ ಮುಂದಡಿ ಇಡುತ್ತಿದ್ದೇವೆ.ಇಲ್ಲಿ ಕಲಿತ ವಿದ್ಯೆಯನ್ನು ಮುಕ್ತ ಮನಸ್ಸಿನಿಂದ ಆಸಕ್ತರಿಗೆ ಹೇಳಿ ಕೊಟ್ಟು ಗುಣಮಟ್ಟದ ಉತ್ಪನ್ನಗಳನ್ನು ತಯಾರು ಮಾಡುವ ಕಾರ್ಯಕ್ಕೆ ಗ್ರಾಮ ಮಟ್ಟದಲ್ಲಿ ಸ್ಥಾನೀಯ ಪರಿಸ್ಥಿತಿಗೆ ಹೊಂದಿಕೊಂಡು ಕಾರ್ಯಪ್ರವೃತ್ತರಾಗಬೇಕಾಗಿದೆ. ಒಬ್ಬ ನುರಿತ ಕುಶಲಕರ್ಮಿ ತನ್ನ ರೀತಿಯ ನೂರಾರು ಮಂದಿಯನ್ನು ಸೃಷ್ಟಿಸುವ ಹಿಂದಿನ ಶಿಕ್ಷಣ ಪದ್ಧತಿಗೆ ಮರುಹುಟ್ಟು ಆಗಬೇಕು.

ಹಿಂದೆ ಒಬ್ಬ ಬಡಗಿ, ಶಿಲ್ಪಿ ತನ್ನ ಸಹಾಯಕನಾಗಿ ಬಂದ ಒಬ್ಬೊಬ್ಬರನ್ನೂ ತನಗಿಂತ ಮಿಗಿಲಾದ ಕಾರ್ಯನಿಪುಣನನ್ನಾಗಿ ಮಾಡುತ್ತಿದ್ದ ರೀತಿ ಪುನರಾವರ್ತನೆ ಆಗಬೇಕು. ಇಲ್ಲಿ ತರಬೇತಿ ಪಡೆಯುವವರು ಸಾವಿರಾರು ಮಂದಿಗೆ ಉದ್ಯೋಗ ನೀಡುವಷ್ಟು ಸಮರ್ಥರಾಗಿ ಹೊರಹೊಮ್ಮಬೇಕು. ಈ ನಿಟ್ಟಿನಲ್ಲಿ ಗ್ರಾಮ ವಿಕಾಸ ಸಮಿತಿ ಮಂಗಳೂರು ವಿಭಾಗ ಹಾಗೂ ವಿವೇಕಾನಂದ ವಿದ್ಯಾವರ್ಧಕ ಸಂಘ (ರಿ) ಪುತ್ತೂರು ಮತ್ತು ಸಹಕಾರ ಭಾರತಿ ದಕ್ಷಿಣ ಕನ್ನಡ ಜಿಲ್ಲೆಇವುಗಳ ಸಹಯೋಗದಲ್ಲಿ ನಿಮಗೆ ಆಸಕ್ತಿ ಇರುವ ಈ ಕೆಳಗ ನೀಡಲಾದ ವಿಷಯಗಳಲ್ಲಿ ತರಬೇತಿ ಪಡೆದು ಸ್ವಾವಲಂಬಿ ಜೀವನ ನಡೆಸಿ ಉದ್ಯೋಗಿ/ಉದ್ಯಮಿಗಳಾಗಿ ಇತರರಿಗೂ ಉದ್ಯೋಗ ನೀಡಿ. ಎಂಬುದು ನಮ್ಮಆಶಯ ಎಂದು ಶಿಬಿರ ವ್ಯವಸ್ಠಾಪಕರು ತಿಳಿಸಿರುತ್ತಾರೆ.

ಶಿಬಿರದ ನೋಂದಣಿ ಶುಲ್ಕ₹.250/-ತರಬೇತಿಯ ವಿಷಯಗಳು

  1. ಕೃಷಿ ಯಂತ್ರೋಪಕರಣಗಳ ದುರಸ್ತಿ
    ಹರೀಶ್ ನಡ್ಸಾರ್ +917090828987
    ಗುರುವಪ್ಪ ದಲ್ಕಜೆ 9880331744
  2. ಹೈನುಗಾರಿಕೆ,ಮೀನುಗಾರಿಕೆ, ಕೋಳಿ ಸಾಕಾಣಿಕೆ ತರಬೇತಿ
    ಕೃಷ್ಣ ಭಟ್ ಬರೆಂಗಾಯಿ 9481446418
    ಜಯಂತ ಓಟೆತಟ್ಟ 9972987043
  3. ಪ್ಲಂಬಿಂಗ್ ಮತ್ತು ಇಲೆಕ್ಟ್ರೀಷಿಯನ್ ತರಬೇತಿ
    ಬಾಲಚಂದ್ರ ನಾಯಕ್ ಕಟ್ಟೆ +919980220947
    ಬಿ ಕೆ ರವಿ +919742036333
  4. ಫುಡ್ ಟೆಕ್ನಾಲಜಿ
    ಶ್ರೀಮತಿ ಗಂಗಾ ಹರಿಕೃಷ್ಣ ಶಾಸ್ತ್ರಿ +919945768908
    ಪ್ರವೀಣ ಪ್ರಭು +919448812211
  5. ಫ್ಯಾಷನ್ ಡಿಸೈನ್ ತರಬೇತಿ
    ಶ್ರೀಮತಿ ಸುಮನಾ +91 94492 44850
  6. ಮೊಬೈಲ್ ರಿಪೇರಿ
    ಹರೀಶ್ ಎಂ 9448623461
  7. ದ್ವಿಚಕ್ರ ವಾಹನಗಳ ದುರಸ್ತಿ ತರಬೇತಿ
    ಅಶೋಕ ಮೂಡಂಬೈಲು 9449105473
    ದೇವಿಪ್ರಸಾದ್ ನಿಡ್ಯಾಳ +918971042740
  8. ಬ್ಯುಟೀಷಿಯನ್‌ ತರಬೇತಿ
    ಶ್ರೀಮತಿ ಪವಿತ್ರ 9448327105
  9. ಕಸಿ ಕಟ್ಟುವುದು & ಜೇನು ಸಾಕಣೆ
    ಉದಯಭಾಸ್ಕರ ಆಜೇರು 9008221844
    ತೀರ್ಥರಾಮ ಆಜೇರು 9731659877
  10. ರಬ್ಬರ್‌ ಟ್ಯಾಪಿಂಗ್
    ದೇವಿಪ್ರಸಾದ್ ಕಲ್ಲಾಜೆ
    9886652495

ನೊಂದಣಿ ಮಾಡಬಯಸುವವರು ತರಬೇತಿಯ ವಿಷಯದ ಜತೆ ಕೊಟ್ಟ ಸಂಪರ್ಕ ಸಂಖ್ಯೆಗೆ ಕರೆ ಮಾಡಿ ನೊಂದಣಿ ಮಾಡಬಹುದು ಮತ್ತು ತರಬೇತಿಯ ಬಗೆಗಿನ ಮಾಹಿತಿ ಪಡೆಯಬಹುದು.ವಿಷಯ ಪ್ರಮುಖರ ದೂರವಾಣಿ ಸಿಗದೇ ಇದ್ದಲ್ಲಿ ಅಥವಾ ಇನ್ನುಳಿದಹೆಚ್ಚಿನ ಮಾಹಿತಿಗಾಗಿ ಇವರನ್ನು ಸಂಪರ್ಕಿಸಿ

ರಾಮಕೃಷ್ಣ ಮೂಡಂಬೈಲು 9449102141
ಜಗದೀಶ ಮಾರಮಜಲು 9480146637
ಅಜಯ್ ಶಾಸ್ತ್ರಿ 9902194905

ಈ ಕೆಳಗಿನ ಲಿಂಕನ್ನು ಕ್ಲಿಕ್ ಮಾಡಿ ನಿಮ್ಮ ವಿವರಗಳನ್ನು ಭರ್ತಿ ಮಾಡಿ ಆನ್ ಲೈನ್ ಮೂಲಕವೂ ನೊಂದಣಿ ಮಾಡಿಕೊಳ್ಳಬಹುದು
??????

https://forms.gle/RrpNPc3fxDGjMQkU9

- Advertisement -

Related news

error: Content is protected !!