Sunday, June 29, 2025
spot_imgspot_img
spot_imgspot_img

ತಾಯಿ ಬೈದಳು ಎಂದು ಆತ್ಮಹತ್ಯೆ ಮಾಡಿಕೊಂಡ 16ರ ಬಾಲಕಿ

- Advertisement -
- Advertisement -

ಬೆಂಗಳೂರು (ನ.2): ಮನೆಗೆಲಸದ ವಿಚಾರವಾಗಿ ತಾಯಿ ಬುದ್ದಿ ಮಾತು ಹೇಳಿದ್ದಕ್ಕೆ ನೊಂದು 16 ವರ್ಷದ ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ಗಿರಿನಗರ ಸಮೀಪ ಮುನೇಶ್ವರ ಬ್ಲಾಕ್‌ನಲ್ಲಿ ಭಾನುವಾರ ನಡೆದಿದೆ.

ಮಹಾಲಕ್ಷ್ಮಿ (16) ಎಂಬಾಕೆಯೇ ಆತ್ಮಹತ್ಯೆ ಮಾಡಿಕೊಂಡ ಬಾಲಕಿ. ಮನೆಯಲ್ಲಿ ತನ್ನ ಎಂಟು ವರ್ಷದ ತಮ್ಮನನ್ನು ಸ್ನಾನಗೃಹದಲ್ಲಿ ಕೂಡಿಹಾಕಿ ಬಳಿಕ ನೇಣು ಬಿಗಿದುಕೊಂಡು ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಬಾಲಕನ ಚೀರಾಟ ಕೇಳಿ ನೆರೆ ಹೊರೆಯರು ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.


ಮೃತ ಮಹಾಲಕ್ಷ್ಮಿ ಗಾಂಧಿ ಬಜಾರಿನಲ್ಲಿ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಳು. ತನ್ನ ತಾಯಿ ಹಾಗೂ ಸೋದರನ ಜತೆ ಆಕೆ ನೆಲೆಸಿದ್ದಳು. ಆಕೆಯ ತಾಯಿ ಸಹ ಮನೆಗೆಲಸ ಮಾಡುತ್ತಿದ್ದಳು. ಸಣ್ಣ ಸಣ್ಣ ವಿಚಾರಗಳಿಗೆಲ್ಲಾ ಮಹಾಲಕ್ಷ್ಮಿ ಕೋಪಿಸಿಕೊಳ್ಳುತ್ತಿದ್ದಳು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ ತಾಯಿ, ಮಗಳಿಗೆ ಬುದ್ಧಿ ಮಾತು ಹೇಳಿದ್ದಳು. ಅಂತೆಯೇ ಭಾನುವಾರ ಸಹ ಮನೆಯಲ್ಲಿ ಕೆಲಸ ಮಾಡುವ ವಿಚಾರವಾಗಿ ತಾಯಿ-ಮಗಳ ಜತೆ ಮಾತಿನ ಚಕಮಕಿ ನಡೆದಿದೆ. ಆಗ ತಾಯಿ ಮಗಳಿಗೆ ಬೈದು ಹೊರ ಹೋಗಿದ್ದಳು.

ಜಗಳದ ಬಳಿಕ ಬೇಸರಗೊಂಡ ಮಹಾಲಕ್ಷ್ಮಿ, ತನ್ನ ತಮ್ಮನ್ನು ಬಲವಂತವಾಗಿ ಸ್ನಾನದ ಮನೆಯಲ್ಲಿ ಕೂಡಿ ಹಾಕಿದ್ದಾಳೆ. ನಂತರ ಆಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸ್ನಾನದ ಮನೆ ಬಾಗಿಲು ತೆಗೆಯುವಂತೆ ಬಾಲಕ ಜೋರಾಗಿ ಗಲಾಟೆ ಮಾಡಿದ್ದಾನೆ. ಈ ಚೀರಾಟ ಕೇಳಿ ನೆರೆಹೊರೆಯವರು ಜಮಾಯಿಸಿದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂಬಂಧ ಗಿರಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!