Friday, June 5, 2026
spot_imgspot_img
spot_imgspot_img

ದರ್ಬೆ ಬೈಪಾಸ್ ನಲ್ಲಿ ಭೀಕರ ರಸ್ತೆ ಅಪಘಾತ-9 ವರ್ಷದ ಮಗು ಸಾವು

- Advertisement -
- Advertisement -

ಪುತ್ತೂರು ನ.2: ದರ್ಬೆ ಬೈಪಾಸ್ ನಲ್ಲಿ ಭೀಕರ ರಸ್ತೆ ಅಪಘಾತ ಇಂದು ಮಧ್ಯಾಹ್ನ ಸಂಭವಿಸಿದ್ದು ಘಟನೆಯಲ್ಲಿ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಈರ್ವರು ಮಕ್ಕಳು, ಮತ್ತು ಓರ್ವ ಮಹಿಳೆ ಯ ಮೇಲೆ ಡಿಕ್ಕಿ ಹೊಡೆದ ಪರಿಣಾಮ 9 ವರ್ಷದ ಮಗು ಸಾವನ್ನಪ್ಪಿದೆ.

ಮಂಗಳೂರಿನಿಂದ ಜಾಲ್ಸೂರಿಗೆ ಚಲಿಸುತ್ತಿದ್ದ ಸ್ವಿಫ್ಟ್‌ ಕಾರು(ಕೆಎಲ್‌ 14ಆರ್‌ 5717) ದರ್ಬೆ ಬೈಪಾಸಿನ ರಸ್ತೆ ಬದಿಯಲ್ಲಿ ಸಂಚರಿಸುತ್ತಿದ್ದ ಈರ್ವರು ಮಕ್ಕಳು ಹಾಗೂ ಓರ್ವ ಮಹಿಳೆಗೆ ಡಿಕ್ಕಿ ಹೊಡೆದಿರುವ ಸ್ವಿಫ್ಟ್ ಕಾರು ಮುಂಭಾಗದಲ್ಲಿ ನಿಂತಿದ್ದ ಎಕ್ಸ್‌ ಕ್ರಾಸ್‌ (ಕೆಎ3ಎನ್‌ ಎಕ್ಸ್‌ 5100) ಕಾರಿಗೆ ಡಿಕ್ಕಿ ಹೊಡೆದಿದೆ. ಈರ್ವರು ಮಕ್ಕಳು ಸಹಿತ ಮೂವರು ಪಾದಾಚಾರಿಗಳು ಗಂಭೀರ ಸ್ವರೂಪ ಗಾಯಗೊಂಡಿದ್ದು ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.ಆದರೆ 9 ವರ್ಷದ ಮಗು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

- Advertisement -

Related news

error: Content is protected !!