Sunday, June 14, 2026
spot_imgspot_img
spot_imgspot_img

ಸಾವರ್ಕರ್ ಮಾಂಸ ತಿನ್ನುತ್ತಿದ್ದರು: ವಿವಾದದ ಕಿಡಿ ಹೊತ್ತಿಸಿದ ಸಚಿವ ಗುಂಡೂರಾವ್ ಹೇಳಿಕೆ

- Advertisement -
- Advertisement -

ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರೂ ಆಗಿರುವ ದಿನೇಶ್‌ ಗುಂಡೂರಾವ್‌, ವೀರ್‌ ಸಾರ್ವಕರ್‌ ಬ್ರಾಹಣ ಸಮುದಾಯದವರು ಅವರು ಕೂಡ ಮಾಂಸಾಹಾರ ಸೇವಿಸುತ್ತಿದ್ದರು. ಈ ಮೂಲಕ ಅವರೊಬ್ಬ ಮಾರ್ಡನಿಸ್ಟ್‌ ಆಗಿದ್ದರು ಎಂಬ ವಿವಾದಾತಕ ಹೇಳಿಕೆ ಕೊಟ್ಟಿದ್ದರು.ವೀರ್‌ ಸಾರ್ವಕರ್‌ ಮೂಲಭೂತವಾದಿ ಆಗಿದ್ದರು. ವಿಶೇಷವೆಂದರೆ ಮೂಲಭೂತವಾದ ನಮ ದೇಶದ ಸಂಸ್ಕೃತಿಯಲ್ಲ. ವೀರ್‌ ಸಾರ್ವಕರ್‌ ಯುರೋಪ್‌ನಿಂದ ಪ್ರಭಾವಿತರಾಗಿದ್ದರೆಂದು ಹೇಳಿದ್ದರು.

ಸಾವರ್ಕರ್ ಬ್ರಾಹ್ಮಣ, ಹಾಗೆಂದು ಅವರು ಖಂಡಿತವಾಗಿಯೂ ಮಾಂಸಾಹಾರ ಸೇವನೆ ಮಾಡುತ್ತಿದ್ದರು. ಮೂಲಭೂತವಾದಿಯಾಗಿದ್ದರೂ ಮಾಡರ್ನ್ ಆಗಿದ್ದ ಅವರು ದನದ ಮಾಂಸ ಸೇವನೆ ಮಾಡುತ್ತಿದ್ದರು ಎಂದು ಕೆಲವರು ಹೇಳಿದ್ದಾರೆ. ಸಾವರ್ಕರ್ ಬಹಿರಂಗವಾಗಿಯೇ ಮಾಂಸಾಹಾರ ಸೇವನೆ ಬಗ್ಗೆ ಅರಿವು ಮೂಡಿಸುತ್ತಿದ್ದರು ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಸಚಿವರ ಈ ಹೇಳಿಕೆ ತೀವ್ರ ವಿವಾದವನ್ನು ಸೃಷ್ಟಿಸಿದೆ. ಹಿಂದೂ ಧರ್ಮದ ಐಕಾನ್‌ನಂತಿರುವ ವೀರ್‌ ಸಾರ್ವಕರ್‌ ಬಗ್ಗೆ ಲಘುವಾಗಿ ಮಾತನಾಡಿರುವ ದಿನೇಶ್‌ ಗುಂಡೂರಾವ್‌ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಅವರ ವಿರುದ್ಧ ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಬಿಜೆಪಿ ಹಾಗೂ ಬಲಪಂಥೀಯ ಸಂಘಟನೆಗಳು ಗುಂಡೂರಾವ್‌ಗೆ ಎಚ್ಚರಿಕೆ ಕೊಟ್ಟಿದ್ದಾರೆ.

- Advertisement -

Related news

error: Content is protected !!