- Advertisement -
- Advertisement -




ಮುಲ್ಕಿ: ವ್ಯಕ್ತಿಯೋರ್ವರು ಮನೆಯಿಂದ ಹೊರ ಹೋಗಿದ್ದು ವಾಪಸು ಬಾರದೇ ನಾಪತ್ತೆಯಾದ ಘಟನೆ ಮುಲ್ಕಿಯಲ್ಲಿ ನಡೆದಿದೆ.
ನಾಪತ್ತೆಯಾದ ವ್ಯಕ್ತಿಯನ್ನು ಕಿನ್ನಿಗೋಳಿ ಪಟ್ಟಣ ಪಂಚಾಯತ್ನ ಮೆನ್ನಬೆಟ್ಟು ಗ್ರಾಮದ ಮಾರಡ್ಕ ನಿವಾಸಿ ರವಿ (34) ಎಂದು ಗುರುತಿಸಲಾಗಿದೆ.
ನಾಪತ್ತೆಯಾಗಿರುವ ರವಿ ಕೂಲಿ ಕೆಲಸವನ್ನು ಮಾಡಿಕೊಂಡಿದ್ದು, ನ. 2 ರ ಬೆಳಿಗ್ಗೆ 10 ಗಂಟೆಗೆ ಮನೆಯಿಂದ ಪೇಟೆಗೆ ಹೋಗಿ ಬರುತ್ತೇನೆಂದು ಹೇಳಿ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿದ್ದಾರೆ. ಅವರ ಮೊಬೈಲ್ಗೆ ಕರೆ ಮಾಡಿದಾಗ ಸ್ವಿಚ್ ಆಪ್ ಇದ್ದು, ನ. 6 ರಂದು ಮನೆಯವರು ಮನೆಯ ಮಾಲೀಕರಿಗೆ ತಿಳಿಸಿ ಬಳಿಕ ಅವರು ಅಸುಪಾಸಿನಲ್ಲಿ ನೆರೆಕರೆಯ ವದಲ್ಲಿ ಸಂಬಂಧಿಕರಲ್ಲಿ ವಿಚಾರಿಸಿ ಹುಡುಕಾಡಿ ರವಿರವರು ಮನೆಗೆ ಬಾರದೇ, ಸಂಬಂಧಿಕರ ಮನೆಗೂ ಹೋಗದೇ ಕಾಣೆಯಾಗಿರುವ ಬಗ್ಗೆ ರವಿಯವರ ಪತ್ನಿ ಶ್ವೇತಾರವರು ಮುಲ್ಕಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.
- Advertisement -