Sunday, June 29, 2025
spot_imgspot_img
spot_imgspot_img

ಮಂಗಳೂರು: ಲೇಡಿಗೋಷನ್ ಆಸ್ಪತ್ರೆಯ 4ನೇ ಮಹಡಿಯಿಂದ ಹಾರಿ ಬಾಣಂತಿ ಸಾವು..!

- Advertisement -
- Advertisement -

ಮಂಗಳೂರು: ಲೇಡಿಗೋಷನ್ ಆಸ್ಪತ್ರೆಯ ನಾಲ್ಕನೇ ಮಹಡಿಯಿಂದ ಹಾರಿ ಬಾಣಂತಿಯೋರ್ವರು ಮೃತಪಟ್ಟ ಘಟನೆ ಇಂದು (ನ.11) ಮುಂಜಾನೆ ನಡೆದಿದೆ.

ಮೃತಪಟ್ಟ ಮಹಿಳೆ ಕಾರ್ಕಳದ ರಂಜಿತಾ (28) ಎಂದು ಗುರುತಿಸಲಾಗಿದೆ.

ರಂಜಿತಾ ಹೆರಿಗೆಗಾಗಿ ಕಾರ್ಕಳ ಆಸ್ಪತ್ರೆಗೆ ದಾಖಲಾಗಿದ್ದು ಬಳಿಕ ಹಲವು ಕ್ಲಿಷ್ಟ ಆರೋಗ್ಯ ಸಮಸ್ಯೆಯಿಂದ ಲೇಡಿಗೋಷನ್‌ಗೆ ಅ.28 ಕ್ಕೆ ದಾಖಲಾಗಿದ್ದರು. ಅ.30 ಕ್ಕೆ ಸಿಸೇರಿಯನ್ ಹೆರಿಗೆಯಾಗಿದ್ದು, ಮಗು ಐಸಿಯುನಲ್ಲಿತ್ತು. ನ.3 ಕ್ಕೆ ಮಗು ಮೃತಪಟ್ಟಿತ್ತು.

ಮಹಿಳೆ ಗುಣಮುಖರಾಗಿದ್ದು ಸೋಮವಾರ ಡಿಸ್ಮಾರ್ಜ್ ಆಗುವುದಾಗಿ ವೈದ್ಯರು ಸೂಚಿಸಿದ್ದರು. ಮನೆಯವರು ಕೂಡ ಸಿದ್ದರಾಗಿ ಬಂದಿದ್ದರು. ಆದರೆ ಮಹಿಳೆ ಏಕಾಏಕಿ ನಾಲ್ಕನೇ ಮಹಡಿಯಿಂದ ಹಾರಿದ್ದಾರೆ. ಕೂಡಲೇ ಮಹಿಳೆಯನ್ನು ವೆನ್ಹಾಕ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಆಕೆ ಮೃತಪಟ್ಟಿದ್ದಾರೆಂದು ಆಸ್ಪತ್ರೆಯ ವೈದ್ಯಾಧಿಕಾರಿಯವರು ತಿಳಿಸಿದ್ದಾರೆ. ಈ ಬಗ್ಗೆ ಮಂಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!