Sunday, June 7, 2026
spot_imgspot_img
spot_imgspot_img

ವಿಟ್ಲ: ಮಂಗಲಪದವಿನಲ್ಲಿಗಾಂಜ ಸೇವಿಸಿ ಸಾರ್ವಜನಿಕರಿಗೆ ಅಡ್ಡಿ ಪಡಿಸುತ್ತಿದ್ದ ಇಬ್ಬರ ಬಂಧನ.!

- Advertisement -
- Advertisement -

ವಿಟ್ಲ: ಸಾರ್ವಜನಿಕರಿಗೆ ಕಿರಿಕಿರಿಯಾಗುವ ರೀತಿಯಲ್ಲಿ ವರ್ತಿಸುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಗಸ್ತುವಿನಲ್ಲಿದ್ದ ಪೊಲೀಸರ ತಂಡ ಬಂಧಿಸಿದ ಘಟನೆ ಮಂಗಲಪದವಿನಲ್ಲಿ ನಡೆದಿದೆ.

ಮೇಗಿನಪೇಟೆ ನಿವಾಸಿ ಮೊಹಮ್ಮದ್ ಅಶ್ರಫ್ (26), ಮೊಹಮ್ಮದ್ ಅರೀಫ್ (27) ಬಂಧಿತ ಆರೋಪಿಗಳಾಗಿದ್ದಾರೆ. ಮಂಗಲಪದವಿನ ಸಾರ್ವಜನಿಕ ಸ್ಥಳದಲ್ಲಿ ಅಗತ್ಯವಾಗಿ ಗಲಾಟೆ ಮಾಡಿಕೊಂಡು ಇತರರಿಗೆ ಕಿರಿಕಿರಿಯಾಗುವ ರೀತಿಯಲ್ಲಿ ವರ್ತಿಸುತ್ತಿದ್ದರು. ಈ ಸಂದರ್ಭ ಪೊಲೀಸ್ ಉಪನಿರೀಕ್ಷಕ ರಾಜೇಶ್ ಹಾಗೂ ಸಿಬ್ಬಂದಿಗಳಾದ ಪ್ರಸನ್ನ, ವಿನಾಯಕ ಅವರು ಗಸ್ತು ವಾಹನದಲ್ಲಿ ಅಲ್ಲಿಗೆ ಹೋಗಿದ್ದು, ಅನುಮಾನ ಬಂದು ವಶಕ್ಕೆ ಪಡೆಯಲಾಗಿದೆ. ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ತಪಾಸಣೆ ನಡೆಸಿದ ಸಂದರ್ಭ ಗಾಂಜಾ ಸೇವನೆ ದೃಢ ಪಟ್ಟ ಹಿನ್ನಲೆಯಲ್ಲಿ ಅವರ ಮೇಲೆ ಪ್ರಕರಣ ದಾಖಲಿಸಿಕೊಂಡು ಬಂಧಿಸಲಾಗಿದೆ.

- Advertisement -

Related news

error: Content is protected !!