ಮಾಣಿ ಬಾಲವಿಕಾಸ ಶಾಲೆಯ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ




ವಿಟ್ಲ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ, ಕ್ಷೇತ್ರ ಸಮಯನ್ವಯಾಧಿಕಾರಿಯವರ ಕಛೇರಿ, ಬಂಟ್ವಾಳ ಮತ್ತು ಶ್ರೀ ಸತ್ಯಸಾಯಿ ಲೋಕಸೇವಾ ಪ್ರೌಢಶಾಲೆ, ಅಳಿಕೆ, ಬಂಟ್ವಾಳ ತಾಲೂಕು ಇವರ ಸಂಯುಕ್ತ ಆಶ್ರಯದಲ್ಲಿ ಬಂಟ್ವಾಳ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ 2024-25 ಶ್ರೀ ಸತ್ಯಸಾಯಿ ಲೋಕಸೇವಾ ಪ್ರೌಢಶಾಲೆ, ಅಳಿಕೆಯಲ್ಲಿ ನಡೆಯಿತು.
ಮಾಣಿ ವಿದ್ಯಾನಗರ ಪೆರಾಜೆಯ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ ಪ್ರಗತಿ (9ನೇ ತರಗತಿ ) ಪ್ರೌಢ ಶಾಲಾ ಮಟ್ಟದ ಕನ್ನಡ ಆಶು ಭಾಷಣ ಮತ್ತು ಚರ್ಚಾ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನವನ್ನು ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಅದೇ ರೀತಿ ಪ್ರಾಥಮಿಕ ವಿಭಾಗದಲ್ಲಿ ದಿಶಾ (4ನೇ ತರಗತಿ) ಕಥೆ ಹೇಳುವ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಪ್ರೌಢ ಶಾಲಾ ವಿಭಾಗದಲ್ಲಿ ಸ್ವಸ್ತಿ ಎಸ್ ಭಟ್ ( 10ನೇ ತರಗತಿ ) ಭಾವಗೀತೆಯಲ್ಲಿ ದ್ವಿತೀಯ ಮತ್ತು ಸಂಸ್ಕೃತ ಧಾರ್ಮಿಕ ಪಠಣದಲ್ಲಿ ತೃತೀಯ, ವೈಷ್ಣವಿ (10ನೇ ತರಗತಿ) ಗಝಲ್ ನಲ್ಲಿ ತೃತೀಯ, ಪೂರ್ವಿ ಎ ಭಾರಧ್ವಜ್ (9ನೇ ತರಗತಿ ) ಹಿಂದಿ ಭಾಷಣದಲ್ಲಿ ತೃತೀಯ, ದೇವಿಕಾ ಕೆ (9ನೇ ತರಗತಿ) ಕವನ ವಾಚನದಲ್ಲಿ ತೃತೀಯ, ಆರೋನ್ ಪಾಯಸ್ (10ನೇ ತರಗತಿ ) ಮತ್ತು ಪುನೀತ್ ಕೆ ಜಿ (10ನೇ ತರಗತಿ ) ರಸಪ್ರಶ್ನೆಯಲ್ಲಿ ತೃತೀಯ, ಹಾಗೂ ಮೊಹಮ್ಮದ್ ನವಾವಿ (10ನೇ ತರಗತಿ ) ಅಬ್ದುಲ್ ಮಾಹಿಜ್ (10ನೇ ತರಗತಿ ) ಮುಹಮ್ಮದ್ ಫಾಝಿಲ್ (10ನೇ ತರಗತಿ ) ಎಂ ಮುಹಮ್ಮದ್ ಸಿಯಾನ್ (10ನೇ ತರಗತಿ ) ಮುಹಮ್ಮದ್ ಹಿಷಾಮ್ (10ನೇ ತರಗತಿ ) ಮೊಹಮ್ಮದ್ ಶುರೈಫ್ (9ನೇ ತರಗತಿ ) ಕವ್ವಾಲಿ ಸ್ಪರ್ಧೆಯಲ್ಲಿ ತೃತೀಯ ಸ್ಥಾನವನ್ನು ಗಳಿಸಿರುತ್ತಾರೆ.