Wednesday, July 2, 2025
spot_imgspot_img
spot_imgspot_img

ಕೊಕ್ಕಡ: ಅಡಿಕೆ ಅಂಗಡಿಯಿಂದ ಹಣ ಕಳ್ಳತನ

- Advertisement -
- Advertisement -

ಪುತ್ತೂರು: ದ್ವಿಚಕ್ರ ವಾಹನದಲ್ಲಿ ಬಂದ ಅಪರಿಚಿತರಿಬ್ಬರು ಅಡಿಕೆ ವ್ಯಾಪಾರಿಯ ಹಣ ಎಗರಿಸಿ ಪರಾರಿಯಾದ ಘಟನೆ ನ. 15ರಂದು ನಡೆದಿದೆ.

ಕೊಕ್ಕಡ ಪ್ರಾಥಮಿಕ ಆರೋಗ್ಯ ಕೇಂದ್ರದ ಎದುರಿನ ಓಣಿತ್ತಾರು ಟ್ರೇಡರ್ಸ್ ನಲ್ಲಿ ನಡೆದಿದೆ.ಬಾಳೆಕಾಯಿ ಮತ್ತು ಅಡಿಕೆ ವ್ಯಾಪಾರಿಯವರ ಅಂಗಡಿಯಿಂದ ರೂ. 1.80 ಲಕ್ಷ ಹಣವನ್ನು ಕಳ್ಳರು ಲಪಟಾಯಿಸಿದ ಘಟನೆ ನಡೆದಿದೆ.

ಮಧ್ಯಾಹ್ನದ ಹೊತ್ತಲ್ಲಿ ಅಂಗಡಿಗೆ ಬಾಳೆಹಣ್ಣು ಖರೀದಿ ನೆಪದಲ್ಲಿ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ವಂಚಕರು ಮಾಲಕ ಇಸುಬುರವರು ಒಳಗಿನಿಂದ ಬಾಳೆಗೊನೆ ತರಲು ತೆರಳಿದ ಸಂದರ್ಭದಲ್ಲಿ ಟೇಬಲ್ ನಲ್ಲಿದ್ದ ಹಣವನ್ನು ಎಗರಿಸಿ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

- Advertisement -

Related news

error: Content is protected !!