Saturday, June 13, 2026
spot_imgspot_img
spot_imgspot_img

ಮುಟ್ಟಿನ ನೋವು ತಾಳಲಾರದೇ ನೋವು ನಿವಾರಕ ಮಾತ್ರೆ ಸೇವಿಸಿದ ಯುವತಿ ಸಾವು..!

- Advertisement -
- Advertisement -

ಮುಟ್ಟಿನ ನೋವು ತಾಳಲಾರದೇ 16 ವರ್ಷದ ಹುಡುಗಿ ಪ್ರತೀ ತಿಂಗಳು ನೋವು ನಿವಾರಕ ಮಾತ್ರೆ ಸೇವಿಸುತ್ತಿದ್ದ ಕಾರಣ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿ ಸಾವನ್ನಪ್ಪಿದ ಘಟನೆ ಇಂಗ್ಲೆಂಡ್ ನಲ್ಲಿ ನಡೆದಿದೆ.

ಮೃತಪಟ್ಟ ಯುವತಿ ಇಂಗ್ಲೆಂಡ್ ನ ಲೈಲಾ (16) ಎಂದು ಗುರುತಿಸಲಾಗಿದೆ.

ನವೆಂಬರ್ 25ರಂದು ಋತು ಸ್ರಾವದ ಮೊದಲ ದಿನದಿಂದ ಲೈಲಾ ಮಾತ್ರೆ ಸೇವಿಸಲು ಪ್ರಾರಂಭಿಸಿದ್ದಾಳೆ. ಆದರೆ ಸಾಮಾನ್ಯವಾಗಿ ಮೂರರಿಂದ ನಾಲ್ಕು ದಿನಗಳಲ್ಲಿ ಮಹಿಳೆಯರಲ್ಲಿ ನೋವು ಕಡಿಮೆಯಾಗುತ್ತದೆ. ಆದರೆ ಈಕೆಯ ಮುಟ್ಟಿನ ನೋವು ಉಲ್ಬಣಗೊಂಡಿದೆ. ಪರಿಣಾಮ ಡಿಸೆಂಬರ್ 05ರ ವೇಳೆಗೆ ಲೈಲಾ ವಿಪರೀತ ವಾಂತಿ ಭೇದಿ ಹಾಗೂ ತಲೆನೋವಿನಿಂದ ಬಳಲುತ್ತಿರುವುದನ್ನು ಕಂಡು ಪೋಷಕರು ಆಕೆಯನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಬಾಲಕಿಯ ತೀವ್ರ ಒದ್ದಾಟವನ್ನು ಕಂಡು ಸಿಟಿ ಸ್ಕ್ಯಾನ್ ಮಾಡಿಸಿದಾಗ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿರುವುದು ತಿಳಿದುಬಂದಿದೆ. ತಕ್ಷಣ ಬೇರೆ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಅಲ್ಲಿ ತುರ್ತು ಶಸ್ತ್ರಚಿಕಿತ್ಸೆಗೆ ಒಳಪಡಿಸಿದ್ದರೂ ಸಹ ಚಿಕಿತ್ಸೆ ಫಲಕಾರಿಯಾಗದೆ, ಮೆದುಳು ನಿಷ್ಕ್ರಿಯಗೊಂಡು ಡಿಸೆಂಬರ್ 13 ರಂದು ಲೈಲಾ ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದರು. ಕುಟುಂಬ ಸಾವಿನ ದುಃಖದ ನುಡುವೆಯೂ ಅಂಗಾಂಗ ದಾನ ಮಾಡುವ ಮೂಲಕ ಮಾನವೀಯತೆ ಮರೆದಿದೆ.

- Advertisement -

Related news

error: Content is protected !!