Saturday, June 28, 2025
spot_imgspot_img
spot_imgspot_img

ಪುತ್ತೂರಿನ ಚೆಲುವೆ ಅನುಷ್ಕಾ ಶೆಟ್ಟಿಗೆ ಹುಟ್ಟುಹಬ್ಬದ ಸಂಭ್ರಮ

- Advertisement -
- Advertisement -

ಪುತ್ತೂರು(ನ.7): ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ ಪುತ್ತೂರಿನ ಚೆಲುವೆ ಅಪ್ಪಟ ಕನ್ನಡತಿಯಾಗಿರುವ ಅನುಷ್ಕಾ ಶೆಟ್ಟಿ.

ಅವರು ಮಿಂಚಿದ್ದು ಮಾತ್ರ ತೆಲುಗು, ತಮಿಳು ಚಿತ್ರರಂಗದಲ್ಲಿ ಈಗಲೂ ಅವರಿಗೆ ಅಲ್ಲಿ ನಂಬರ್ 1 ಪಟ್ಟ ಇದೆ. ಇವರು ಬೆಳ್ಳಿಪ್ಪಾಡಿ ಉರಮಲು ಗುತ್ತು ಕುಟುಂಬದಿಂದ ಬಂದಿದ್ದಾರೆ. ಪೋಷಕರ ಹೆಸರು ಪ್ರಫುಲ್ಲ ಮತ್ತು ಎ.ಎನ್. ವಿಠಲ ಶೆಟ್ಟಿ. ಇಬ್ಬರು ಸಹೋದರರು, ಗುಣರಂಜನ್ ಶೆಟ್ಟಿ ಮತ್ತು ಸಾಯಿ ರಮೇಶ್ ಶೆಟ್ಟಿ. ಸಾಯಿ ರಮೇಶ್ ಒಬ್ಬ ಡೆಂಟಲ್ ಸರ್ಜನ್ ಆಗಿದ್ದಾರೆ.

ಮಂಗಳೂರಿನ ಬೆಡಗಿ ಅನುಷ್ಕಾ ಶೆಟ್ಟಿ ದಶಕಗಳ ಕಾಲ ಸತತ ಪರಿಶ್ರಮ, ಬದ್ಧತೆ ಮೂಲಕ ತೆಲುಗು ಚಿತ್ರರಂಗದಲ್ಲಿ ಅವರು ಗಳಿಸಿದ ಹೆಸರು ಅಪಾರ. ಪುರುಷ ಪಾತ್ರಕ್ಕೆ ಸಮಾನವಾಗಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಸಸ್ಪೆನ್ಸ್ ಥ್ರಿಲ್ಲರ್ ಇರಲಿ, ರೋಮ್ಯಾಂಟಿಕ್ ಕಾಮಿಡಿ ಇರಲಿ, ಐತಿಹಾಸಿಕ ಕಥೆಯಾಗಿರಲಿ ಆಯಾ ಪಾತ್ರಗಳಿಗೆ ಜೀವ ತುಂಬುತ್ತಾರೆ ಈ ಸ್ವೀಟಿ ಶೆಟ್ಟಿ.

- Advertisement -

Related news

error: Content is protected !!