ಕೋಡಿಂಬಾಡಿಗೆ ಹೆಮ್ಮೆ ತರುವ ಸಂಸ್ಥೆಯಾಗಿ ಬೆಳೆಯಲಿ:- ಶಾಸಕ ಅಶೋಕ್ ಕುಮಾರ್ ರೈ



ಪುತ್ತೂರು: ಅಕ್ಕರೆ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ (ನಿ.) ಕೋಡಿಂಬಾಡಿ ಇದರ ಉದ್ಘಾಟನಾ ಸಮಾರಂಭವು ಅ. 21 ರ ಬುಧವಾರ ಬೆಳಿಗ್ಗೆ 10.43ಕ್ಕೆ ಶಿವ ಕಾಂಪ್ಲೆಕ್ಸ್ ಕೋಡಿಂಬಾಡಿಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಅಶೋಕ್ ಕುಮಾರ್ ರೈ ಕೆ.ಎಸ್. ಅವರು ಉದ್ಘಾಟಿಸಿ, ಮಾತನಾಡಿ ಕೋಡಿಂಬಾಡಿಗೆ ಹೆಮ್ಮೆ ತರುವ ಸಂಸ್ಥೆಯಾಗಿ ಅಕ್ಕರೆ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಬೆಳೆಯಲಿ ಎಂದು ಶುಭ ಹಾರೈಸಿದರು .



ದೀಪ ಪ್ರಜ್ವಲನೆಯನ್ನು ಜಿಲ್ಲಾ ಸಹಕಾರಿ ಬ್ಯಾಂಕ್ ಮಂಗಳೂರು ಇದರ ನಿರ್ದೇಶಕರಾದ ಭಾಸ್ಕರ್ ಎಸ್. ಕೋಟ್ಯಾನ್ ಕೊಳಕೆ ಇರ್ವತ್ತೂರು ಅವರು ನೆರವೇರಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಜಿತ್ ಕೆ.ಆರ್. ಪೂಜಾರಿ ಅವರು ವಹಿಸಿದ್ದು, ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿ ಬೆಂಗಳೂರು ಇದರ ನಿರ್ದೇಶಕರಾದ ಶಶಿಕುಮಾರ್ ರೈ ಬಾಲ್ಯೊಟ್ಟು ಅವರು ನೆರವೇರಿಸಿದರು.
ಭದ್ರತಾ ಕೊಠಡಿಯನ್ನು ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿ ಪುತ್ತೂರು ಇದರ ಅಧ್ಯಕ್ಷರಾದ ಚಂದ್ರಹಾಸ ಶೆಟ್ಟಿ ಎನ್. ಅವರು ಉದ್ಘಾಟಿಸಿದರೆ, ನಗದು ಪತ್ರ ವಿತರಣೆಯನ್ನು ರೈ ಎಸ್ಟೇಟ್ & ಬಿಲ್ಡರ್ಸ್ ಮಂಗಳೂರು ಮಾಲಕರಾದ ಶ್ರೀಮತಿ ಸುಮಾ ಅಶೋಕ್ ರೈ ಅವರು ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಪುತ್ತೂರು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಪುತ್ತೂರು ವಕೀಲರ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್, ಪುತ್ತೂರು ಗ್ಯಾರಂಟಿ ಸಮಿತಿಯ ಉಮಾನಾಥ ಶೆಟ್ಟಿ, ದ.ಕ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಚ್ ಮಹಮ್ಮದ್ ಆಲಿ, ಕೋಡಿಂಬಾಡಿ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಷರೀಫ್, ವಿಜಯ ಬ್ಯಾಂಕ್ ನಿವೃತ್ತ ಪ್ರಬಂಧಕ ಸೀತಾರಾಮ ಶೆಟ್ಟಿ ಹೆಗ್ಡೆಹಿತ್ಲು, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಉದ್ಯಮಿ ಸತೀಶ್ ಚಂದ್ರ ಸಾಲ್ಯಾನ್ ಇರುವೈಲ್ ಪಾಣಿಲ, ಕೆಪಿಎಸ್ ಶಾಲೆ ಕೋಡಿಂಬಾಡಿ ಎಸ್ಡಿಎಂಸಿ ಅಧ್ಯಕ್ಷೆ ಸ್ಪೂರ್ತಿ ರಾಜಮಣಿ ರೈ, ಯುವಶಕ್ತಿ ಗೆಳೆಯರ ಬಳಗದ ಗೌರವಾಧ್ಯಕ್ಷ ರಮೇಶ ನಾಯಕ್ ನಿಡ್ಯ, ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ರಾಧಾಕೃಷ್ಣ ನಾಯಕ್, ದ.ಕ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಶಯನಾ ಜಯಾನಂದ, ರೈತ ಸಂಘದ ನಿರ್ದೇಶಕ ದೇವಾನಂದ ಕೆ, ದ.ಕ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಮುರಳಿಧರ ರೈ, ಪುತ್ತೂರು ರೈ ಎಸ್ಟೇಟ್ ಎಜುಕೇಶನಲ್ ಚ್ಯಾರಿಟೇಬಲ್ ಟ್ರಸ್ಟ್ (ರಿ.) ಕಾರ್ಯಧ್ಯಕ್ಷರು ಸುದೇಶ್ ಶೆಟ್ಟಿ ಶಾಂತಿನಗರ, ಪುತ್ತೂರು ಗಣೇಶ್ ಬೀಡಿ ವ್ಯವಸ್ಥಾಪಕರು ಚಂದ್ರ ಬದಿನಾರು, ಉದ್ಯಮಿ ರಫಿಕ್ ಮೊಟ್ಟೆತ್ತಡ್ಕ, ಕೋಡಿಂಬಾಡಿ ಸಾರ್ವಜನಿಕ ಶ್ರೀ ಗಣೆಶೋತ್ಸವ ಸಮಿತಿ ಅಧ್ಯಕ್ಷರು ಭರತ್ ಗೌಡ ನಿಡ್ಯ , ಕೋಡಿಂಬಾಡಿ”ಗಣೇಶ್ ಪ್ರಸಾದ “ಸದಾಶಿವ ರೈ, ಮಂಗಳೂರು ನಂದಾದೀಪ ಪೌಂಡೇಶನ್ ಸದಾನಂದ ಪೂಜಾರಿ ತುಂಬೆ , ಉದ್ಯಮಿ ಕೋಡಿಂಬಾಡಿ ಹುಸೈನ್ ಕೆ.ಬಿ.ಕೆ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯ ಪ್ರವರ್ತಕರಾದ ಜಯಪ್ರಕಾಶ್ ಬದಿನಾರು, ನಿರ್ದೇಶಕರಾದ ಅಜಿತ್ ಕೆ.ಆರ್. ಪೂಜಾರಿ ಕೋಡಿಂಬಾಡಿ, ಡೆನ್ನಿಸ್ ಮಸ್ಕರೇನಸ್ ಸೇಡಿಯಾಪು, ಸುಭಾಸ್ ನಾಯಕ್ ನೆಕ್ಕರಾಜೆ, ಗಣೇಶ್ ಹೆಗ್ಡೆ ಸೇಡಿಯಾಪು, ಗಣೇಶ್ ಶೆಟ್ಟಿ ಬೆಳ್ಳಿಪ್ಪಾಡಿ, ಬಾಲಚಂದ್ರ ಗೌಡ ಬಾರ್ತಿಕುಮೇರು, ನಿಹಾಲ್ ಪಿ. ನಾಯಕ್, ಅಬ್ದುಲ್ ರಝಾಕ್ ಕೋಡಿಂಬಾಡಿ, ಶ್ರದ್ಧಾ ಸುದೇಶ್ ಶೆಟ್ಟಿ ಶಾಂತಿನಗರ, ವಿಜಯ ಬಿ. ಗೌಡ, ತುಳಸಿ ಕಜೆ, ಗಂಗಾಧರ ನಾಯ್ಕ ಮಿತ್ತಳಿಕೆ ಹಾಗೂ ಕಾರ್ಯ ನಿರ್ವಹಣಾಧಿಕಾರಿ ವಿನುತಾ ಜಯಪ್ರಕಾಶ್ ಅತಿಥಿಗಳನ್ನು ಗೌರವಪೂರ್ವಕವಾಗಿ ಸ್ವಾಗತಿಸಿದರು.
ಕಾರ್ಯಕ್ರಮದ ನಿರೂಪಣೆ, ಸ್ವಾಗತ ಹಾಗೂ ವಂದನಾರ್ಪಣೆಯನ್ನು ಬಾಲಕೃಷ್ಣ ಪೊರ್ದಾಲು ನೆರವೇರಿಸಿದರು.








