

ಲಯನ್ಸ್ ಕ್ಲಬ್ ವಿಟ್ಲ ಹಾಗೂ ಲಿಯೋ ಕ್ಲಬ್ ವಿಟ್ಲ, ಎನ್‌ಎಸ್‌ಎಸ್ ಘಟಕ ವಿಠಲ ಪದವಿ ಪೂರ್ವ ಕಾಲೇಜು ವಿಟ್ಲ, ಯೆನೆಪೋಯ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆ ದೇರಳಕಟ್ಟೆ, ಸಾರ್ವಜನಿಕ ಆರೋಗ್ಯ ದಂತ ವೈದ್ಯಕೀಯ ವಿಭಾಗ ಮತ್ತು ಯೆನೆಪೋಯ ದಂತ ಮಹಾವಿದ್ಯಾಲಯ ದೇರಳಕಟ್ಟೆ ಇದರ ನೇತೃತ್ವದಲ್ಲಿ, ವಿಟ್ಲ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ವಿಠಲ ಎಜುಕೇಶನ್ ಸೊಸೈಟಿ ಸಹಯೋಗದೊಂದಿಗೆ ಮೆಗಾ ಉಚಿತ ವೈದ್ಯಕೀಯ ಮತ್ತು ದಂತ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ವಿಠಲ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು.

ವಿಟ್ಲ ಲಯನ್ಸ್ ಅಧ್ಯಕ್ಷ ರಜಿತ್ ಆಳ್ವ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಲಯನ್ಸ್ ಜಿಲ್ಲಾ ಗವರ್ನರ್ ಬಿ.ಎಂ. ಭಾರತಿರವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷ ಕರುಣಾಕರ ನಾಯ್ತೋಟ್ಟು, ಲಯನ್ಸ್ ಜಿಲ್ಲಾ ಸಂಪುಟ ಕಾರ್ಯದರ್ಶಿ ಗೀತಾ ರಾವ್, ವಿಟ್ಲ ಸಮುದಾಯ ಅರೋಗ್ಯ ಕೇಂದ್ರದ ವೈದ್ಯಧಿಕಾರಿ ವೇದಾವತಿ ಬಿ, ಜಿಲ್ಲಾ ಮಾಜಿ ಗವರ್ನರ್ ಡಾಕ್ಟರ್ ಗೀತಾಪ್ರಕಾಶ್, ಯೇನೆಪೋಯ ಆಸ್ಪತ್ರೆಯ ದಂತ ವೈದ್ಯಾಧಿಕಾರಿ ಡಾಕ್ಟರ್ ಅಪೂರ್ವ, ವಲಯಾಧ್ಯಕ್ಷ ಸುದೇಶ್ ಭಂಡಾರಿ, ವಿಟ್ಲ ಲಯನ್ಸ್ ಕಾರ್ಯದರ್ಶಿ ಅರವಿಂದ್ ರೈ, ಕೋಶಾಧಿಕಾರಿ ಮನೋಜ್ ರೈ, ನಿಕಟಪೂರ್ವ ಅಧ್ಯಕ್ಷೆ ಜಲಜಾಕ್ಷಿ ಬಿ, ಡಾಕ್ಟರ್ ಗಾಯತ್ರಿ ಪ್ರಕಾಶ್, ಲಿಯೋ ಅಧ್ಯಕ್ಷ ಲಿಯೋ ಮೋನಿಶ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಲಯನ್ ಸದಸ್ಯರಾದ ಕಲಂದರ್, ದೇವಿಪ್ರಸಾದ್ ಶೆಟ್ಟಿ, ಪ್ರಭಾಕರ್ ಆಚಾರ್ಯ, ಮೋನಪ್ಪ ಗೌಡ, ಬಾಲಕೃಷ್ಣ ಗೌಡ, ಅಂಥೋನಿ ಲೋಬೊ, ಲಕ್ಷ್ಮಣ್ ಮಾಸ್ಟರ್, ಜಯ ವಿ ರೈ, ವಿಮಲಾ ಶೆಟ್ಟಿ, ಪುಷ್ಪಲತಾ, ರಶ್ಮಿ ಆಳ್ವ, ಲಿಯೋ ರಿಷಿಕ್ ಆಳ್ವ ಮತ್ತು ವಿಠಲ ಪದವಿ ಪೂರ್ವ ಕಾಲೇಜಿನ ಎನ್‌ಎಸ್‌ಎಸ್‌ನ ವಿದ್ಯಾರ್ಥಿಗಳು ಸಹಕರಿದರು.
ಕಾರ್ಯಕ್ರಮದ ಮುಖ್ಯ ಸಂಯೋಜಕ ಜಿಲ್ಲಾ ಹೆಲ್ತ್ ಕ್ಯಾಂಪ್ (ದಂತ ವಿಭಾಗ) ನ ಸಂಯೋಜಕ ಲಯನ್ ಡಾಕ್ಟರ್ ಇರ್ಮಾಡಿ ಶರತ್ ಚಂದ್ರ ಶೆಟ್ಟಿಯವರು ಕಾರ್ಯಕ್ರಮ ನಿರ್ವಹಿಸಿದರು.