



ವಿಟ್ಲ: ಪಿ.ಎಂ.ಶ್ರೀ.ಸರಕಾರಿ ಪ್ರೌಢಶಾಲೆ (RMSA) ವಿಟ್ಲ ಪ್ರತಿಭಾ ಪುರಸ್ಕಾರ ಮತ್ತು ಶಾಲಾ ವಾರ್ಷಿಕೋತ್ಸವ ಸಂಭ್ರಮವು ಡಿ.13ನೇ ಶುಕ್ರವಾರ ಮತ್ತು 14ನೇ ಶನಿವಾರ ಪಿ.ಎಂ.ಶ್ರೀ. ಸರಕಾರಿ ಪ್ರೌಢಶಾಲೆ (RMSA) ವಿಟ್ಲ ಇಲ್ಲಿ ನಡೆಯಲಿದೆ.

ದಿನಾಂಕ: 13-12-2024ನೇ ಶುಕ್ರವಾರ ಬೆಳಿಗ್ಗೆ 9:30ಕ್ಕೆ ಪಿ.ಎಂ.ಶ್ರೀ.ಸರಕಾರಿ ಪ್ರೌಢಶಾಲೆ (RMSA) ವಿಟ್ಲ- ಪ್ರಾಥಮಿಕ ವಿಭಾಗ ವವಿಶ್ರಾಂತಿ ಶಿಕ್ಷಕಿ ಪ್ರೇಮಲತಾ.ಪಿ ಧ್ವಜಾರೋಹಣ ಮಾಡಲಿದ್ದಾರೆ. ಬಳಿಕ ಬಹುಮಾನ ವಿತರಣಾ ಸಮಾರಂಭದ ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ. ಪಿ. ಎಂ. ಶ್ರೀ. ಸರಕಾರಿ ಪ್ರೌಢಶಾಲೆ (RMSA) ವಿಟ್ಲ-ಪ್ರೌಢ ವಿಭಾಗ ಅಧ್ಯಕ್ಷೆ ರಶ್ಮಿ ಹರೀಶ್ ವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ವಿಟ್ಲ ಶ್ರೀ ಯೋಗೀಶ್ವರ ಗೋರಕ್ಷನಾಥ ಮಠ ಮಠಾಧಿಪತಿ ರಾಜಗುರು ಶ್ರದ್ಧಾನಾಥಜೀ ಮಹರಾಜ್, ವಿಟ್ಲ ಪಟ್ಟಣ ಪಂಚಾಯತ್ ಉಪಾಧ್ಯಕ್ಷೆ ಸಂಗೀತ ಪಾಣೆಮಜಲು, ವಿಟ್ಲ ವಲಯ ಶಿಕ್ಷಣ ಸಂಯೋಜಕಿ ಸುಧಾ, ವಿಟ್ಲ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಕರುಣಾಕರ ಕುಲಾಲ್, ವಿಟ್ಲ ಲಯನ್ಸ್ ಕ್ಲಬ್ ಅಧ್ಯಕ್ಷ ಲ.ರಜಿತ್ ಆಳ್ವ, ಸಿ.ಆರ್.ಪಿ ವಿಟ್ಲ ಕ್ಲಸ್ಟರ್ ಬಿಂದು ಬಿ.ಜೆ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ದಿನಾಂಕ: 14-12-2024ನೇ ಶನಿವಾರ ಸಂಜೆ 6:00ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರ ಶಾಸಕ ಅಶೋಕ್ ಕುಮಾರ್ ರೈ ಘನ ಉಪಸ್ಥಿತರಿರುವರು. ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷ ಕರುಣಾಕರ ಗೌಡ ನಾಯ್ತೊಟ್ಟು ಅಧ್ಯಕ್ಷತೆ ವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ವಿಟ್ಲ ಪಟ್ಟಣ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ರವಿಪ್ರಕಾಶ್ ವಿಟ್ಲ, ವಿಟ್ಲ ಉದ್ಯಮಿ ಹರೀಶ್ ನಾಯಕ್, ಬಂಟ್ವಾಳ ತಾಲೂಕು ಶಿಕ್ಷಣಾಧಿಕಾರಿ ಮಂಜುನಾಥನ್ ಎಂ.ಜಿ, ವಿಟ್ಲ ಶ್ರೀ ಭಾರತೀ ಜನಾರ್ಧನ ಸೇವಾ ಟ್ರಸ್ಟ್ ಕಾರ್ಯದರ್ಶಿ ಪಿ. ಸುಬ್ರಾಯ ಪೈ, ವಿಟ್ಲ ಸಮಾಜ ಸೇವಕ( ಆಪದ್ಬಾಂಧವ) ಮುರಳೀಧರ, ವಿಟ್ಲ ಹಿರಿಯ ವಿದ್ಯಾರ್ಥಿ ಸಂಘ ಅಧ್ಯಕ್ಷ ಮೋನಪ್ಪ ಗೌಡ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಪೂರ್ವಾಹ್ನ 10:00ಕ್ಕೆ ವಿಟ್ಲ ಅಂಗನವಾಡಿ, ಪೂರ್ವಾ ಪ್ರಾಥಮಿಕ (LKG,UKG),1 ರಿಂದ 4 ಕನ್ನಡ ಮತ್ತು ಆಂಗ್ಲಮಾಧ್ಯಮದ ವಿದ್ಯಾರ್ಥಿಗಳಿಂದ ಪ್ರತಿಭಾ ಪ್ರದರ್ಶನ ನಡೆಯಲಿದೆ. ಊಟದ ವಿರಾಮದ ಬಳಿಕ ಅಪರಾಹ್ನ 2:30 ರಿಂದ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿದ್ಯಾರ್ಥಿಗಳಿಂದ ಪ್ರತಿಭಾ ಪ್ರದರ್ಶನ ನಡೆಯಲಿದೆ.