



ವಿಟ್ಲ: ಪಿ.ಎಂ.ಶ್ರೀ. ಸರಕಾರಿ ಪ್ರೌಢಶಾಲೆ (RMSA) ವಿಟ್ಲದಲ್ಲಿ ಪ್ರತಿಭಾ ಪುರಸ್ಕಾರ ಮತ್ತು ಶಾಲಾ ವಾರ್ಷಿಕೋತ್ಸವ ಸಂಭ್ರಮ 2024-25 ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮ ನಡೆಯಿತು.

ಬೆಳಗ್ಗೆ ಪಿ ಎಂ ಶ್ರೀ ಸರಕಾರಿ ಪ್ರೌಢಶಾಲೆ (RMSA) ಪ್ರಾಥಮಿಕ ವಿಭಾಗದ ವಿಶ್ರಾಂತ ಶಿಕ್ಷಕರು ಪುಪ್ಪಲತಾ ಪಿ ಇವರು ಧ್ವಜಾರೋಹಣ ನೆರವೇರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬಳಿಕ ಶ್ರೀಮತಿ ರಶ್ಮೀ ಹರೀಶ್ ಎಸ್.ಡಿ.ಎಂ.ಸಿ ಅಧ್ಯಕ್ಷರು ಪಿ ಎಂ ಶ್ರೀ ಸರಕಾರಿ ಪ್ರೌಢಶಾಲೆ (RMSA) ವಿಟ್ಲ ಇವರ ಅಧ್ಯಕ್ಷತೆಯಲ್ಲಿ ನಡೆದ ಬಹುಮಾನ ವಿತರಣಾ ಸಮಾರಂಭದಲ್ಲಿ ಶ್ರೀ ರಾಜಗುರು ಶ್ರದ್ಧಾನಾಥಜೀ ಮಹಾರಾಜ್, ಮಠಾಧಿಪತಿಗಳು ಶ್ರೀ ಯೋಗೀಶ್ವರ ಗೋರಕ್ಷಕನಾಥಮಠ ವಿಟ್ಲ, ಶ್ರೀಮತಿ ಸಂಗೀತ ಪಾಣೆಮಜಲು ಉಪಾಧ್ಯಕ್ಷರು ಪಟ್ಟಣ ಪಂಚಾಯತ್ ವಿಟ್ಲ, ಶ್ರೀಮತಿ ಸುಧಾ ಶಿಕ್ಷಣ ಸಂಯೋಜಕರು ವಿಟ್ಲ ವಲಯ, ಕರುಣಾಕರ ಕುಲಾಲ್ ಮುಖ್ಯಾಧಿಕಾರಿಗಳು ಪಟ್ಟಣ ಪಂಚಾಯತ್ ವಿಟ್ಲ, ಲ.ರಜತ್ ಆಳ್ವ ಅಧ್ಯಕ್ಷರು ಲಯನ್ಸ್ ಕ್ಲಬ್ ವಿಟ್ಲ, ಶ್ರೀಮತಿ ಬಿಂದು ಬಿ.ಜೆ ವಿಟ್ಲ ಕ್ಲಸ್ಟರ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶಾಲಾ ವಾರ್ಷಿಕೋತ್ಸವ ಸಲುವಾಗಿ ವಿದ್ಯಾರ್ಥಿಗಳಿಗೆ ನಡೆಸಿದ ಆಟೋಟ ಸ್ಪರ್ಧೆ, ವಿವಿಧ ಸ್ಪರ್ಧೆಗಳ ಬಹುಮಾನಗಳನ್ನು ವಿತರಿಸಲಾಯಿತು.