- Advertisement -
- Advertisement -






ವಿಟ್ಲ: ವಿಟ್ಲ ಪೇಟೆ ಮೊದಲಿನಿಂದಲೇ ವಾಹನ ಜಖಂ ಮತ್ತು ವಾಹನ ಸಂಚಾರಕ್ಕೆ ಅಡ್ಡಿ ಆಗುವುದರಲ್ಲಿ ಮೊದಲೇ ಪ್ರಸಿದ್ಧಿ ಪಡೆದಿದೆ.ಯಾಕೆಂದರೆ ನಾಲ್ಕು ಮಾರ್ಗಗಳಲ್ಲಿ ಇಕ್ಕಟ್ಟಾಗಿರುವ ಕಾರಣ ವಿಟ್ಲದ ಪೇಟೆಯಲ್ಲಿ ಟ್ರಾಫಿಕ್ ಜಾಮ್ ಸಾಮಾನ್ಯವಾಗಿದೆ.ಇಂದು ವಿಟ್ಲ ಪೇಟೆಯ ಮಂಗಳೂರು ರಸ್ತೆಯ ಅಮಿತ್ ಹೋಟೆಲ್ ಬಳಿ ಆಕ್ವಿವಾ ಸವಾರೊಬ್ಬರು ಪಕ್ಕದಲ್ಲಿದ್ದ ವೈನ್ ಶಾಪ್ ನಿಂದ ಹೊರಟಾಗ ಅವರು ಗಾಡಿ ತೆಗೆಯುವ ರಭಸದಲ್ಲಿ ಮಂಗಳೂರು ಕಡೆಯಿಂದ ಬೈಕ್ ಸವಾರೊಬ್ಬ ಬಂದು ನಿಂತಿದ್ದ ಓಮ್ನಿ ಕಾರಿಗೆ ಡಿಕ್ಕಿ ಹೊಡೆದು ಇಬ್ಬರು ರಸ್ತೆಗೆ ಉರುಳಿದ ಘಟನೆ ನಡೆದಿದೆ. ಈ ಘಟನೆಯಲ್ಲಿ ಒಟ್ಟು ಮೂರು ವಾಹನಗಳು ಜಖಂ ಆಗಿರುತ್ತದೆ.ಬೈಕ್ ನಲ್ಲಿದ್ದ ಇಬ್ಬರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ.
- Advertisement -








